ಸ್ಕೂಟರ್ ಅಪಘಾತ, ಕಾರ್ಮಿಕ ಸಾವು

Crime_20251021221553630.jpg
Published on

ದಾವಣಗೆರೆ : ನಗರದ ಹದಡಿ ರಸ್ತೆಯಲ್ಲಿ ಸೋಮವಾರ ಮಧ್ಯರಾತ್ರಿ ಸ್ಕೂಟರ್ ಕಂಬಕ್ಕೆ ಡಿಕ್ಕಿಯಾಗಿ ಪಶ್ಚಿಮ ಬಂಗಾಳದ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ.  ಮಹಮದ್ ಜಾವೀದ್ (35) ಮೃತ ವ್ಯಕ್ತಿ. ಹೋಂಡಾ ಆ್ಯಕ್ಟಿವಾ ಸ್ಕೂಟರ್‌ನಲ್ಲಿ ಮಹಮದ್ ಜಾವೀದ್, ಸ್ನೇಹಿತರಾದ ಷೇಕ್ ಸಲ್ಮಾನ್ ಮತ್ತು ಷೇಕ್ ಹಯಾಜ್ ಜತೆಗೆ ಹೊರಟಿದ್ದರು.  ಹದಡಿ ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡ ಚಾಲಕ ಮಹಮದ್ ಜಾವೀದ್ ಅಲ್ಲಿನ ಕಂಬವೊಂದಕ್ಕೆ ಡಿಕ್ಕಿ ಹೊಡೆದಿದ್ದರಿಂದ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ. ಸಂಚಾರ (ದಕ್ಷಿಣ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net