ಸ್ಕೂಟರ್‌ಗೆ ಬಸ್ ಡಿಕ್ಕಿ, ಅಧಿಕಾರಿ ಸಾವು

dvg-P.-Thippeshappa.jpg
Published on

ದಾವಣಗೆರೆ : ನಗರದ ರಿಂಗ್ ರಸ್ತೆಯ ಎಜು ಏಷ್ಯಾ ಶಾಲೆಯ ಬಳಿ ಶುಕ್ರವಾರ ಬೆಳಗ್ಗೆ ಸ್ಕೂಟರ್‌ಗೆ ಹಿಂದಿನಿಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಆರ್‌ಟಿಒ ಕಚೇರಿಯ ಅಧೀಕ್ಷಕ ತಿಪ್ಪೇಶಪ್ಪ (45) ಸ್ಥಳದಲ್ಲೇ ಮೃತಪಟ್ಟರು.  ತಿಪ್ಪೇಶಪ್ಪ ಶಾಮನೂರಿನಲ್ಲಿರುವ ಮನೆಯಿಂದ ಸ್ಕೂಟರ್‌ನಲ್ಲಿ (ಹೊಂಡಾ ಆ್ಯಕ್ಟಿವಾ) ಕಚೇರಿಗೆ ಹೊರಟಿದ್ದರು. ರಿಂಗ್ ರಸ್ತೆಯಲ್ಲಿ ಹೋಗುವಾಗ ರಾಣೇಬೆನ್ನೂರು ಕಡೆಯಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಆಯ ತಪ್ಪಿ ಕೆಳಗೆ ಬಿದ್ದ ತಿಪ್ಪೇಶಪ್ಪ ಅವರ ಮೇಲೆ ಬಸ್‌ನ ಹಿಂದಿನ ಗಾಲಿ ಹಾದು ಹೋಗಿದೆ. ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.  ತಿಪ್ಪೇಶಪ್ಪ ಚಿಕ್ಕಮಗಳೂರು ಜಿಲ್ಲೆಯ ಶಿವನಿ ಗ್ರಾಮದವರಾಗಿದ್ದು ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net