ರಸ್ತೆ ಅಪಘಾತದಲ್ಲಿ ಅರ್ಚಕ ಸಾವು

Crime_20250717004156024.jpg
Published on

ದಾವಣಗೆರೆ :  ಸಮೀಪದ ಲಕ್ಕಮುತ್ತೇನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬೆಳಗಿನ ಜಾವ ಕಾರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ದೇವಸ್ಥಾನದ ಅರ್ಚಕರೊಬ್ಬರು ಮೃತಪಟ್ಟಿದ್ದಾರೆ.  ಯರಗುಂಟೆ ಗ್ರಾಮದ ಡಿ.ಎನ್. ಬಾಲಸುಬ್ರಮಣ್ಯಂ (54) ಮೃತರು. ಅವರು ಸ್ವಿಫ್ಟ್ ಕಾರಿನಲ್ಲಿ ಬೆಂಗಳೂರಿಗೆ ಹೊರಟಿದ್ದರು. ಲಕ್ಕಮುತ್ತೇನಹಳ್ಳಿ ಬಳಿ ಅಪರಿಚಿತ ವಾಹನವೊಂದು ಅತಿ ವೇಗ ಮತ್ತು ನಿರ್ಲಕ್ಷೃದಿಂದ ಬಂದಿದ್ದರಿಂದ ಅಪಘಾತ ಸಂಭವಿಸಿ ಡಿ.ಎನ್. ಬಾಲಸುಬ್ರಮಣ್ಯಂ ಸ್ಥಳದಲ್ಲೇ ಮೃತಪಟ್ಟರು.  ಅಪಘಾತವೆಸಗಿದ ವಾಹನ ನಿಲ್ಲಿಸದೇ ಹೋಗಿದ್ದು ವಾಹನ ಮತ್ತು ಚಾಲಕನ ಹೆಸರು, ವಿಳಾಸ ತಿಳಿದು ಬಂದಿಲ್ಲ. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net