ಕಾರು ಡಿಕ್ಕಿ, ಯುವಕ ಸಾವು

dvg-car_20250625004255447.jpg
Published on

ಚನ್ನಗಿರಿ : ತಾಲೂಕಿನ ದೋಣಿಹಳ್ಳಿ ಬಳಿ ಮಂಗಳವಾರ ರಾತ್ರಿ ರಸ್ತೆ ಬದಿ ನಿಂತಿದ್ದವರಿಗೆ ಕಾರು ಡಿಕ್ಕಿಯಾಗಿ ಒಬ್ಬ ಯುವಕ ಮೃತಪಟ್ಟು 7 ಮಂದಿ ಗಾಯಗೊಂಡಿದ್ದಾರೆ.  ಸಂದೇಶ ನಾಯ್ಕ (19) ಮೃತ ಯುವಕ. ಗಾಯಾಳುಗಳಾದ ಪ್ರವೀಣ, ರವಿ, ವೆಂಕಟೇಶ, ಚೇತು, ನಿತಿನ್, ಆಂಜನೇಯ ಮತ್ತು ರುದ್ರನಾಯ್ಕ ಅವರು ಚನ್ನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಒಟ್ಟು 9 ಮಂದಿ ಸ್ನೇಹಿತರು 3 ಬೈಕುಗಳಲ್ಲಿ ಚಿಕ್ಕಮಗಳೂರು ಜಿಲ್ಲೆ ರಂಗಯ್ಯನಗಿರಿಗೆ ಹೋಗಿ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಮೂತ್ರ ವಿಸರ್ಜನೆಗಾಗಿ ದೋಣಿಹಳ್ಳಿ ಬಳಿ ನಿಂತಿದ್ದರು. ವೇಗವಾಗಿ ಬಂದ ಕಾರು ಡ್ಕಿಕಿಯಾಗಿದೆ. ಕಾರು ಚಾಲಕ ಪರಾರಿಯಾಗಿದ್ದಾನೆ. ಅವರೆಲ್ಲ ಯಾವ ಊರಿನವರು ಎಂಬ ಮಾಹಿತಿ ಲಭ್ಯವಾಗಿಲ್ಲ. ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net