ಗೈರಾದವರಿಗೆ ಮರು ಪರೀಕ್ಷೆ ಅವಕಾಶಕ್ಕೆ ಆಗ್ರಹ

DAVANAGERE VV UNIVERCITY
Published on

ದಾವಣಗೆರೆ, ಎಬಿವಿಪಿ, ವಿಶ್ವವಿದ್ಯಾನಿಲಯ, ಪದವಿ ಪರೀಕ್ಷೆ, Davanagere, ABVP, University, Degree Examination


ದಾವಣಗೆರೆ: ಅಂತಿಮ ಪದವಿ ಪರೀಕ್ಷೆಗೆ ಗೈರಾದವರಿಗೆ ಮರು ಪರೀಕ್ಷೆ ಬರೆಯುವ ಅವಕಾಶ ನೀಡುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸೋಮವಾರ ದಾವಣಗೆರೆ ವಿವಿ ಕುಲಪತಿ ಶರಣಪ್ಪ ವಿ.ಹಲಸೆ, ಕುಲಸಚಿವರಾದ ಬಸವರಾಜ್ ಬಣಕಾರ್, ಎಚ್.ಎಸ್.ಅನಿತಾ ಅವರಿಗೆ ಮನವಿ ಸಲ್ಲಿಸಿದೆ.

ಕರೊನಾ ರೋಗದ ಹಿನ್ನೆಲೆಯಲ್ಲಿ ಬಸ್ಸುಗಳ ಕೊರತೆ ನಡುವೆಯೂ ಸರ್ಕಾರದ ಅನುಮತಿ ಮೇರೆಗೆ ಈ ಹಿಂದೆ ವಿವಿಯು ಅಂತಿಮ ಪದವಿ ಪರೀಕ್ಷೆ ನಡೆಸಿದೆ. ಕೆಲವು ವಿದ್ಯಾರ್ಥಿಗಳು ಕರೊನಾ ಪೀಡಿತರಾಗಿಯೋ, ಬಸ್ಸುಗಳ ಕೊರತೆಯಿಂದಾಗಿ ಪರೀಕ್ಷೆಯಿಂದ ವಂಚಿತರಾಗಿದ್ದಾರೆ.

ಯುಜಿ, ಪಿ.ಜಿಯ ಟರ್ಮಿನಲ್ ಸೆಮಿಸ್ಟರ್‌ನ ಆಗಸ್ಟ್/ ಸೆಪ್ಟೆಂಬರ್ 2020 ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸದವರು, ಅರ್ಜಿ ಸಲ್ಲಿಸಿ ಪರೀಕ್ಷೆಗೆ ಹಾಜರಾಗದವರು, ಒಂದು ಅಥವಾ ಹೆಚ್ಚಿನ ವಿಷಯದ ಪರೀಕ್ಷೆಗೆ ಗೈರಾದವರಿಗೆ ಮತ್ತೊಮ್ಮೆ ಪರೀಕ್ಷೆಗೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷಾ ವಂಚಿತರಿಗೆ ಸೆಪ್ಲಿಮೆಂಟರಿಯವರ ಜತೆಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿತ್ತು. ದಾವಣಗೆರೆ ವಿವಿ ಇದೇ ಮಾದರಿ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಕೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಜೇಂದ್ರ, ಜಿಲ್ಲಾ ಸಂಚಾಲಕ ಸತೀಶ್ ಚಿತ್ರದುರ್ಗ, ದಾವಣಗೆರೆ ನಗರ ಕಾರ್ಯದರ್ಶಿ ಆಕಾಶ್ ಇಟಗಿ, ಜಯಂತ್, ಹರೀಶ್, ಮಧು, ರಂಜಿತ್, ಭಾವನಾ, ಅಮೃತವರ್ಷಿಣಿ, ಕಿರಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net