

ದಾವಣಗೆರೆ : ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವದ ಮೊದಲ ದಿನವಾದ (ಪೂರ್ವಾರಾಧನೆ) ಮಂಗಳವಾರ ಜಿಲ್ಲಾದ್ಯಂತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ನಗರದ ಕೆಬಿ ಬಡಾವಣೆ ರಾಯರ ಮಠದಲ್ಲಿ ಬೆಳಗ್ಗೆ 5 ಗಂಟೆಗೆ ನಿರ್ಮಾಲ್ಯ ವಿಸರ್ಜನೆ, ನಂತರ ಸುಪ್ರಭಾತ, ಫಲ ಪಂಚಾಮೃತ, ಶ್ರೀಹರಿ ವಾಯುಸ್ತುತಿ ಪಾರಾಯಣ, ಶ್ರೀ ರಾಘವೇಂದ್ರ ಸ್ತೋತ್ರ, ಅಷ್ಟೋತ್ತರ ಪಾರಾಯಣ, ಕನಕಾಭಿಷೇಕ ಮಾಡಲಾಯಿತು. ಪಂಡಿತರಿಂದ ಉಪನ್ಯಾಸ, ಮಹಾ ನೈವೇದ್ಯ, ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಗುರುರಾಯರ ವೃಂದಾವನಕ್ಕೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ಸಂಜೆ ದೀವುಟಗಿ ಸೇವೆ, ಪ್ರಾಕಾರ ರಥೋತ್ಸವ, ಅಷ್ಟಾವಧಾನ, ಮಹಾ ಮಂಗಳಾರತಿ ನೆರವೇರಿದವು. ನಮನ ಅಕಾಡೆಮಿಯ ಮಾಧವಿ ಗೋಪಾಲಕೃಷ್ಣ ಮತ್ತು ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ಸುಂದರವಾಗಿ ಮೂಡಿಬಂದಿತು. ಶ್ರೀ ಗುರುರಾಜ ಸೇವಾ ಸಂಘದ ಅಧ್ಯಕ್ಷ ಕೋಸ ಪ್ರಸನ್ನ ಕುಮಾರ್, ಕಾರ್ಯದರ್ಶಿ ಎನ್.ಎಸ್. ರಾವ್, ಖಜಾಂಚಿ ವಾಗೀಶಾಚಾರ್, ಸಂಘದ ನಿರ್ದೇಶಕರಾದ ಧೃವ ರಾವ್ ನರಗನಹಳ್ಳಿ, ಸಿ.ಕೆ. ಆನಂದ ತೀರ್ಥಾಚಾರ್, ಕಂಪ್ಲಿ ಗುರುರಾಜ ಆಚಾರ್, ಹಿರಿಯ ವಕೀಲರಾದ ಜೆ.ಎನ್. ವಸಂತಕುಮಾರ್, ಶ್ರೀನಿವಾಸ ನರಗನಹಳ್ಳಿ, ಶ್ರೀಧರ ಕುಲಕರ್ಣಿ, ಪ್ರಹ್ಲಾದ ಆಚಾರ್ ನರಗನಹಳ್ಳಿ, ಕಡೂರು ವಾಚಸ್ಪತಿ ಆಚಾರ್, ಕಡೂರು ಪ್ರಾಣೇಶ ಆಚಾರ್ ಇದ್ದರು. ನಾಳೆ ಗುರುರಾಯರ ಮಧ್ಯಾರಾಧನೆ ಪ್ರಯುಕ್ತ ವಿಶೇಷ ಹೂವಿನ ಅಲಂಕಾರ ಮಾಡಲಾಗುವುದು. ... * ಪಿ.ಜೆ. ಬಡಾವಣೆ ಮಠ ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಗುರು ಸ್ತೋತ್ರ ಪಾರಾಯಣ ಮತ್ತು ಫಲ ಪಂಚಾಮೃತ, ರಾಯರ ಪಾದಪೂಜೆ ನೆರವೇರಿತು. ನಂತರ ಅಲಂಕಾರ ಪೂಜೆ, ಪ್ರವಚನ, ನೈವೇದ್ಯ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ನಡೆದವು. ಸಂಜೆ ಪಲ್ಲಕ್ಕಿ ಉತ್ಸವ, ಅಷ್ಟಾವಧಾನ, ತೊಟ್ಟಿಲು ಪೂಜೆ, ಮಹಾ ಮಂಗಳಾರತಿ ಮಾಡಲಾಯಿತು. ರಾಮ ಗೋಪಾಲ್ ಕಟ್ಟಿ, ಗುರುರಾಜ್, ನಾಗರಾಜ್, ಎಂ.ಬಿ. ಬದರಿನಾಥ್, ಪ್ರಕಾಶ್ ನಾಡಿಗೇರ್, ಪಿ. ಸುಶೀಲೇಂದ್ರ ದೇವಳೆ, ಬಂದರೀಶ್ ದೇವಳೆ, ಶ್ರೀಧರ್ ಘಟಿಕರ್ ಹಾಗೂ ಭಕ್ತರು ಪಾಲ್ಗೊಂಡಿದ್ದರು.