ರಂಗಾಪುರ ಮಠಕ್ಕೆ ದವಸ, ಧಾನ್ಯ ಸಂಗ್ರಹ

FotoJet (1)
Published on

ನೊಣವಿನಕೆರೆ : ತಿಪಟೂರು ತಾಲೂಕು ನೊಣವಿನಕೆರೆ ಗ್ರಾಮಕ್ಕೆ ಮಂಗಳವಾರ ಕೆರೆಗೋಡಿ ರಂಗಾಪುರ ಮಠದ ಶ್ರೀಗುರುಪರದೇಶಿಕೇಂದ್ರ ಸ್ವಾಮೀಜಿ ಭೇಟಿ ನೀಡಿ ಮಠದ ದಾಸೋಹಕ್ಕೆ ದವಸ, ದಾನ್ಯ, ತೆಂಗಿನ ಕಾಯಿ ಇತರ ವಸ್ತುಗಳನ್ನು ಸಂಗ್ರಹಿಸಿದರು.

ನೊಣವಿನಕೆರೆ ಹಳೆ ಬಸ್​ ನಿಲ್ದಾಣದ ಬಳಿ ತಳಿರು ತೋರಣಗಳಿಂದ ಶೃಂಗರಿಸಿ, ವಾದ್ಯಘೋಷ್ಠಿಯಾಂದಿಗೆ ಶ್ರೀಗಳನ್ನು ಶ್ರೀಮಠದ ಭಕ್ತರು ಮತ್ತು ಗ್ರಾಮಸ್ಥರು ಸ್ವಾಗತಿಸಿ, ಮೆರವಣೆಗೆಯೊಂದಿಗೆ ಮಾರುತಿ ವೃತ್ತದ ಹತ್ತಿರದಲ್ಲಿರುವ ಗ್ರಾಮದೇವತೆ ಶ್ರೀಉಡಿಸಲ ಕೆಂಪಮ್ಮದೇವಿ ಉತ್ಸವಮೂರ್ತಿ ದೇವಸ್ಥಾನಕ್ಕೆ ಕರೆತಂದು ವಿಶೇಷ ಪೂಜೆ ಸಲ್ಲಿಸಿದರು.

ನಂತರ ಮಾತನಾಡಿದ ಶ್ರೀಗಳು, ನೊಣವಿನಕೆರೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಹಲವಾರು ವರ್ಷಗಳಿಂದ ಶ್ರೀಮಠದ ದಾಸೋಹಕ್ಕೆ ಅಕ್ಕಿ, ಭತ್ತ, ತೆಂಗಿನಕಾಯಿ ಸೇರಿದಂತೆ ತಾವು ಬೆಳೆದ ವಸ್ತುಗಳನ್ನು ಅರ್ಪಿಸಿ ಪರೋಕ್ಷವಾಗಿ ಶ್ರೀಮಠಕ್ಕೆ ಸೇವೆಸಲ್ಲಿಸುತ್ತಿರುವುದು ಹಿಂದಿನಿಂದಲೂ ನಡೆದು ಬಂದಿದೆ. ಪ್ರತಿವರ್ಷ ತಾವು ಬೆಳೆದ ಬೆಳೆಯಲ್ಲಿ ಸ್ವಲ್ಪಭಾಗ ಮಠಕ್ಕೆ ತೆಗೆದಿಟ್ಟು ಉಳಿದದನ್ನು ಬಳಸಿಕೊಳ್ಳುವ ಪದ್ಧತಿ ಈ ಭಾಗದ ಜನರು ಅನುಸರಿಸುವ ಮೂಲಕ ಭಗವಂತ ಮತ್ತು ಭಕ್ತನ ನಡುವಿನ ಸಂಬಂದಕ್ಕೆ ಸಾಕ್ಷಿಯಾಗಿದ್ದಾರೆ ಎಂದರು.

ವಿನಾಯಕ ಮಂಟಪ, ಗುಂಗರಮಳೆ ಸರ್ಕಲ್​ ಹಾಗೂ ರೇಣುಕ ಮಂದಿರ ಬಳಿ ಗ್ರಾಮಸ್ಥರಿಂದ ಭತ್ತ, ರಾಗಿ ಇತರೆ ವಸ್ತುಗಳನ್ನು ಸಂಗ್ರಹಿಸಲಾಯಿತು.

ಗ್ರಾಪಂ ಅಧ್ಯಕ್ಷ ಧನಂಜಯ್​, ಕನ್ವಿನಿಯರ್​ ಬಸವರಾಜು, ಗುಡಿಗೌಡ್ರು ಕನ್ನೇಗೌಡ, ಗ್ರಾಮಸ್ಥರಾದ ಎನ್​.ಸಿ.ಕುಮಾರ್​, ದಯಾನಂದ್​ ಕಾಬೋರಪ್ಪ, ವೇದಾನಂದ, ಮೋಹನ್​ಕುಮಾರ್​, ಹಿರಣ್ಣಯ್ಯ, ಶ್ರೀಉಡಿಸಲಕೆಂಪಮ್ಮ ಯುವಕ ಬಳಗದವರು, ವಿವಿಧ ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net