

ಗೋಣಿಕೊಪ್ಪಲು: ಧಾನ್ಯಲಕ್ಷ್ಮಿಯನ್ನು ಮನೆಗೆ ಬರಮಾಡಿಕೊಳ್ಳುವ ಪುತ್ತರಿ ಹಬ್ಬವನ್ನು ಪೊನ್ನಂಪೇಟೆ ತಾಲೂಕಿನ ಕಿರುಗೂರು ಗ್ರಾಮದಲ್ಲಿ ಶನಿವಾರ ಸಂಭ್ರಮದಿಂದ ಆಚರಿಸಲಾಯಿತು.
ಶ್ರೀ ಮಹದೇವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಅಲೆಮಾಡ ಸುಧೀರ್ ನೇತೃತ್ವದಲ್ಲಿ ಅರ್ಚಕ ತೀರ್ಥೆಶ್ ಮುಂದಾಳತ್ವದಲ್ಲಿ ಶನಿವಾರ ಬೆಳಗ್ಗೆ 10.30 ಗಂಟೆಗೆ ಗ್ರಾಮಸ್ಥರೆಲ್ಲ ಸೇರಿ ಮೆರವಣಿಗೆಯ ಮೂಲಕ ಗದ್ದೆಗೆ ತೆರಳಿ ಕದಿರು ತೆಗೆದರು.
ಬಳಿಕ ಮೆರವಣಿಗೆಯ ಮೂಲಕ ಮಹದೇವರ ದೇವಸ್ಥಾನಕ್ಕೆ ಬಂದು ದೇವರಿಗೆ ಪೂಜೆ ಸಲ್ಲಿಸಿ, ದೇವರಿಗೆ ಕದಿರು ಹಾಕಿ ತೀರ್ಥ ಪ್ರಸಾದ ಸ್ವೀಕರಿಸಲಾಯಿತು.