ತಾಯಿಯ ಚಿಕಿತ್ಸೆಗೆ ನೆರವು ಕೋರಿದ ಪುತ್ರಿ

neravige more
ಇಮ್ಯುನೊಥೆರಪಿಯ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ
Published on

ಮೈಸೂರು: ನಗರದ ಖಾಸಗಿ ಆಸ್ಪತ್ರೆಯಲ್ಲಿ ಇಮ್ಯುನೊಥೆರಪಿಯ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯೊಬ್ಬರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದು, ಅವರ ಪುತ್ರಿ ಆರ್ಥಿಕ ಸಹಾಯ ಕೋರಿದ್ದಾರೆ.
ನನ್ನ ತಾಯಿ18 ತಿಂಗಳುಗಳಿಂದ 4ನೇ ಹಂತದ ಲಿಂಫೋಮಾ ಜತೆ ಹೋರಾಡುತ್ತಿದ್ದು, ಅವರಿಗೆ 6 ಹಂತದ ಕಿಮೋಥೆರಪಿ ಆಗಿದೆ. ಈಗ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಮ್ಯುನೊಥೆರಪಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನೂ ಒಂದು ವರ್ಷ ಇಮ್ಯುನೊಥೆರಪಿ ಮುಂದುವರಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೆ, ಇತ್ತೀಚೆಗೆ ನನ್ನ ತಂದೆ ಕರುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ನಮ್ಮದು ಸಣ್ಣ ಕೃಷಿಕ ಕುಟುಂಬವಾಗಿದ್ದು ತಾಯಿಯ ಚಿಕಿತ್ಸೆಗೆ ಹಣ ಹೊಂದಿಸಲು ಅಸಾಧ್ಯವಾಗಿದೆ. ಸಹಾಯ ಪಡೆಯಲು ನನಗೆ ಒಡಹುಟ್ಟಿದವರು ಅಥವಾ ಸಂಬಂಧಿಕರು ಇಲ್ಲದ ಕಾರಣ, ಇಬ್ಬರನ್ನು ಆರೈಕೆ ಮಾಡುತ್ತಿರುವುದರಿಂದ ನಾನು ಯಾವುದೇ ಉದ್ಯೋಗಕ್ಕೆ ಹೋಗುತ್ತಿಲ್ಲ. ಹಾಗಾಗಿ, ಚಿಕಿತ್ಸೆ ಮುಂದುವರಿಸಲು ಆರ್ಥಿಕ ನೆರವಿನ ಅಗತ್ಯವಿದೆ. ನೆರವಾಗುವವರು ತಮ್ಮ ಕೈಲಾದ ಧನ ಸಹಾಯ ಮಾಡಬಹುದು ಎಂದು ಕೋರಿದ್ದಾರೆ.

ದಾನಿಗಳಿದ್ದಲ್ಲಿ ಮೊ. 8095139423 ಈ ಮೊಬೈಲ್ ಸಂಖ್ಯೆಗೆ ಪೋನ್ ಪೇ ಮತ್ತು ಗೂಗಲ್ ಪೇ ಮೂಲಕ ನೆರವು ನೀಡಬಹುದು. ಅಥವಾ ಬ್ಯಾಂಕ್ ಖಾತೆಗೆ ಹಣ ವರ್ಗಾಹಿಸಬಹುದು. ಬ್ಯಾಂಕ್ ಆಫ್ ಬರೋಡಾ, ಖಾತೆ ಸಂಖ್ಯೆ : 64170100012037, ಐಎಫ್‌ಎಸ್‌ಸಿ ಕೋಡ್ ; BARB0VJNAGR 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net