ಮಗಳನ್ನು ಕೊಂದು, ತಾಯಿ ನೇಣಿಗೆ ಶರಣು

WhatsApp Image 2023-10-14 at 5.41.37 PM
Published on

ಮಗನ ಸ್ಥಿತಿ ಗಂಭೀರ, ದಾವಣಗೆರೆ ಆಸ್ಪತ್ರೆಗೆ ದಾಖಲು

ಹರಪನಹಳ್ಳಿ(ವಿಜಯನಗರ): ಕೌಟುಂಬಿಕ ಕಲಹಕ್ಕೆ ಮಗಳು ಬಲಿಯಾಗಿದ್ದು, ಮಗನ ಸ್ಥಿತಿ ಚಿಂತಾಜನಕವಾಗಿದೆ. ತಾಯಿ ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಶನಿವಾರ ಬೆಳಗಿನಜಾವ ಸಂಭವಿಸಿದೆ.

ಮೃತರನ್ನು ಬೇಗಂ ಬೀ(೫೦), ಮಗಳು ಶಮಾ ಬಾನು(೧೮) ಗುರುತಿಸಲಾಗಿದೆ. ಮಗ ಅಮಾನುಲ್ಲಾ(೧೬) ಸ್ಥಿತಿ ಗಂಭೀರವಾಗಿ ದಾವಣಗೆರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮಕ್ಕಳು ತನ್ನ ಮಾತು ಕೇಳುತ್ತಿಲ್ಲ. ಮನೆಯಲ್ಲಿ ಸರಿಯಾಗಿ ಕೆಸಲ ಮಾಡುತ್ತಿಲ್ಲ ಎಂಬುದು ಬೇಗಂ ಬೀ ಅವರಲ್ಲಿ ಅಸಮಾಧಾನ ಮೂಡಿಸಿತ್ತು. ಇದೇ ವಿಚಾರವಾಗಿ ಶುಕ್ರವಾರ ರಾತ್ರಿ ಮನೆಯಲ್ಲಿ ಗಲಾಟೆಯಾಗಿದೆ. ಮಕ್ಕಳು ಮಲಗಿದ ಬಳಿಕ ದೊಣ್ಣೆಯಿಂದ ತಲೆಗೆ ಬಲವಾಗಿ ಹಲ್ಲೆ ನಡೆಸಿದ್ದಾರೆ. ಪರಿಣಾಮ ಮಗಳು ಶಮಾ ಬಾನು ಸ್ಥಳದಲ್ಲೇ ಸಾವನ್ನಪ್ಪಿದ್ದು, ಅಮಾನುಲ್ಲಾ ತಲೆಯಿಂದ ರಕ್ತ ಸ್ರಾವಗೊಂಡಿದ್ದರಿAದ ಪ್ರಜ್ಞಾಹೀನಗೊಂಡಿದ್ದ. ಮಕ್ಕಳಿಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿದು, ಬೇಗಂ ಬೀ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶನಿವಾರ ಬೆಳಗ್ಗೆ ಬೇಗಂ ಬೀ ಮನೆ ಬಾಗಿಲು ತೆರೆಯದಿದ್ದರಿಂದ ಅನುಮಾನಗೊಂಡ ಗ್ರಾಮಸ್ಥರು ಬಾಗಿಲು ಮುರಿದಾಗ ಘಟನೆ ಬೆಳಕಿಗೆ ಬಂದಿದ್ದು, ಗಾಯಾಳು ಅಮಾನುಲ್ಲಾನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಸ್ಥಳಕ್ಕೆ ಭೇಟಿ ಪರಿಶೀಲಿಸಿದರು. ಈ ಕುರಿತು ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net