

ಹಾವೇರಿ: ನಿಮ್ಮ ಮಗಳು ದುಬೈನಲ್ಲಿ ಡ್ರಗ್ಸ್ ಜತೆಗೆ ಸಿಕ್ಕಿದ್ದು ಅವಳನ್ನು ಬಿಡಲು ಹಣ ನೀಡಬೇಕು ಎಂದು ಮಹಿಳೆಯೊಬ್ಬರಿಂದ 50 ಸಾವಿರ ರೂ. ವಸೂಲಿ ಮಾಡಿರುವ ಕುರಿತು ಇಲ್ಲಿಯ ಸೈಬರ್ ಕ್ರೆೈಂ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ನಗರದ ಲಕ್ಷಿ$್ಮಪ್ರಭಾ ಎಂಬುವರಿಗೆ ಮೋಸ ಮಾಡಿರುವುದು.
ಇವರಿಗೆ ಅಪರಿಚಿತ ವ್ಯಕ್ತಿಯೊಬ್ಬ ತಾವು ಗುಜರಾತ ಪೊಲೀಸ್ ಆಗಿದ್ದು ಸದ್ಯ ದುಬೈನಲ್ಲಿದ್ದೇನೆ. ನಿಮ್ಮ ಮಗಳು ಡ್ರಗ್ಸ್ ಜತೆಗೆ ಸಿಕ್ಕಿಬಿದ್ದಿದ್ದಾಳೆ. ಅವಳನ್ನು ಬಿಡಿಸಿ ಕಳುಹಿಸುತ್ತೇನೆ. ಅದಕ್ಕಾಗಿ 50 ಸಾವಿರ ರೂ. ಹಾಕಿ ಎಂದು ಫೋನ್ ಪೇ ಮೂಲಕ ಹಣ ಹಾಕಿಸಿಕೊಂಡು ವಂಚಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.