ನಟ ಸತ್ಯಜಿತ್​ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ ಮಗಳು! ಹಿರಿಜೀವದ ಮೇಲೆ ಆರೋಪಗಳ ಸುರಿಮಳೆ

satyajit
Published on

ಬೆಂಗಳೂರು: ನನ್ನ ಅಪ್ಪ, ನನ್ನ ಅಣ್ಣಂದಿರು ಹಣ ಕೊಡು ಎಂದು ಹಲ್ಲೆ ಮಾಡ್ತಾರೆ, ಬೈತಾರೆ ಎಂದು ಚಿತ್ರನಟ ಸತ್ಯಜಿತ್​ರ ಮಗಳು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ.

ಬಾಣಸವಾಡಿ ಪೊಲೀಸ್ ಠಾಣೆಗೆ ಇತ್ತೀಚೆಗೆ ದೂರು ನೀಡಿದ್ದ ಸತ್ಯಜಿತ್ ಮಗಳು ಅಖ್ತರ್ ಸ್ವಲೇಹಾ, ತನ್ನ ತಂದೆ ಮತ್ತು ಇಬ್ಬರು ಅಣ್ಣಂದಿರ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಅಪ್ಪನ ಜೀವನಾಂಶಕ್ಕೆ ತಿಂಗಳಿಗೆ 1 ಲಕ್ಷ ರೂಪಾಯಿ ದುಡ್ಡು ಕೊಡುತ್ತಿದ್ದೆ. ನಾನೀಗ ತುಂಬು ಗರ್ಭಿಣಿ, ಕೆಲಸಕ್ಕೆ ಹೋಗುತ್ತಿಲ್ಲ. ಹೀಗಾಗಿ ಮೊದಲಿನ ಹಾಗೆ ಸಹಾಯ ಮಾಡಲಾಗುತ್ತಿಲ್ಲ. ಹಣಕ್ಕಾಗಿ ಅಪ್ಪ ಟಾರ್ಚರ್ ಕೊಡುತ್ತಿದ್ದಾರೆ. ಪ್ರತಿದಿನ ಬೆದರಿಕೆ ಕರೆಗಳು ಬರುತ್ತಿವೆ. ತಂದೆಯೇ ಇದನ್ನೆಲ್ಲಾ ಮಾಡಿಸುತ್ತಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿರಿ Video| ಬಿಜೆಪಿ ಮುಖಂಡನ ಬರ್ತ್ ​ಡೇ ಪಾರ್ಟಿಯಲ್ಲಿ ಜನರತ್ತ ಕಂತೆಕಂತೆ ಹಣ ಚೆಲ್ಲಿದ್ರು! ಈ ದೃಶ್ಯ ನೋಡಿದ್ರೆ ಸಿಟ್ಟಿಗೇಳ್ತೀರಿ

ಅಖ್ತರ್​ ಸಲ್ವೆಯ ದೂರು ಆಧಾರಿಸಿ ಎನ್​ಸಿಆರ್ ದಾಖಲಿಸಿಕೊಂಡಿದ್ದ ಪೊಲೀಸರು, ಕುಟುಂಬಸ್ಥರನ್ನು ಕರೆಸಿ ಬುದ್ಧಿವಾದ ಹೇಳಿ ಕಳುಹಿಸಿದ್ದರು. ಪ್ರಕರಣ ಸದ್ಯ ವಿಚಾರಣೆ ಹಂತದಲ್ಲಿದೆ.

ಇನ್ನು ಸತ್ಯಜಿತ್​ ಅವರ ಕಾಲಿಗೆ ಗ್ಯಾಗ್ರಿಂಗ್​ ಆಗಿ ಮೂರ್ನಾಲ್ಕು ವರ್ಷಗಳ ಹಿಂದೆ ಆಸ್ಪತ್ರೆ ಸೇರಿದ್ದರು. ಇದೀಗ ಮಗಳ ಈ ಆರೋಪವನ್ನು ಅಲ್ಲಗೆಳೆದಿರುವ ಸತ್ಯಜಿತ್​ರ ಮಗ ಆಕಾಶ್​ ಸತ್ಯಜಿತ್​, 'ನಾನು ಪೈಲೆಟ್​ ಬಿಟ್ರೆ ಬೇರೆ ಕೆಲ್ಸ ಮಾಡಲ್ಲ ಎಂದು ನನ್ನ ತಂಗಿ ಹೇಳಿದ್ದಳು. ಓದಲು ವಿದೇಶಕ್ಕೆ ಹೋಗಲು ಬ್ಯಾಂಕ್​ನಲ್ಲಿ ಸಾಲ ಮಾಡಿಕೊಂಡಿದ್ದಳು. ಕೊನೆಗೆ ಎಜುಕೇಶನ್​ ಲೋನ್ ಅನ್ನು ನೀವೆ ಕಟ್ಟಿ ಎಂದು ನನ್ನ ತಂದೆಗೆ ಹೇಳಿದ್ಲು. ಅವಳು ಮಾಡಿದ್ದ 50 ಲಕ್ಷ ರೂ. ಸಾಲವನ್ನು ಮನೆ ಮಾರಿ ನಮ್ಮ ತಂದೆಯವರೇ ಕಟ್ಟಿದ್ದರು. ನಾವಿಬ್ಬರೂ ಗಂಡು ಮಕ್ಕಳಿದ್ದೇವೆ. ಹಾಗಿದ್ದ ಮೇಲೆ ನಮ್ಮ ತಂದೆ ಏಕೆ ಆಕೆ ಬಳಿ ಹಣ ಕೊಡುವಂತೆ ಪೀಡಿಸ್ತಾರೆ? ನನ್ನ ತಂದೆಯ ವಿರೋಧದ ನಡುವೆಯೂ ಅಖ್ತರ್ ಸ್ವಲೆ ಮೂರು ವರ್ಷದ ಹಿಂದೆ ಲವ್​ ಮ್ಯಾರೇಜ್​ ಆದಳು. ಅವಳ ಗಂಡ ಕೆಲಸಕ್ಕೆ ಹೋಗಲ್ಲ...' ಎಂದು ವಿವರಿಸಿದರು.

'ನಾನು ಮನೆ ಮಾರಿ ನಿನಗೆ ಲೋನ್​ ಕ್ಲಿಯರ್​ ಮಾಡ್ಸಿದ್ದೇನೆ. ನಾವು ಬಾಡಿಗೆ ಮನೆಯಲ್ಲಿ ಇದ್ದೇವೆ. ನಿನಗೆ ಪೈಲಟ್​ ಕೆಲಸ ಸಿಗುವಂತಾಗಲು ನಾನು ನನ್ನ ಮನೆಯನ್ನೇ ಕಳೆದುಕೊಂಡೆ. ಈಗ ನನಗೆ ಒಂದು ಮನೆ ಕೊಡ್ಸು ಎಂದು ನನ್ನ ತಂದೆಯು ಮಗಳ ಬಳಿ ಎರಡು ತಿಂಗಳ ಹಿಂದೆ ಕೇಳಿದ್ದರಂತೆ. ಅದಕ್ಕೆ ಆಕೆ ಒಪ್ಪಲಿಲ್ಲ ಅಂತೆ...' ಎಂದು ಆಕಾಶ್​ ಸತ್ಯಜಿತ್​ ತಿಳಿಸಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net