

ಹುಬ್ಬಳ್ಳಿ: ಇಲ್ಲಿಯ ಮಂಜುನಾಥನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಾ. ಶಾಂತಣ್ಣ ಕಡಿವಾಲ ದತ್ತಿ ಉಪನ್ಯಾಸ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಾಹಿತಿ ಗದಿಗಯ್ಯ ಹಿರೇಮಠ, ಮಕ್ಕಳಲ್ಲಿ ಒಳ್ಳೆಯ ಕಲೆ ಹಾಗೂ ನೈಪುಣ್ಯತೆ ತುಂಬಲು ಶಿಕ್ಷಕರ ಪಾತ್ರ ಅಮೂಲ್ಯ. ಎಳೆಯ ಮಕ್ಕಳಲ್ಲಿ ಕಲಾತ್ಮಕ ಅಂಶಗಳನ್ನು ತಿಳಿಸುವದರಿಂದ ಅವರ ಮಾನಸಿಕ ಬೆಳವಣಿಗೆ ಆಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪದ ವಿದ್ಯಾ ವಂಟಮುರಿ, ಕಡಿವಾಲ ಅವರ ಕೊಡುಗೆ ಸ್ಮರಿಸಿದರು.
ದತ್ತಿ ದಾನಿಗಳಾದ ಡಾ. ಶಾಂತಣ್ಣ ಅವರು ಮಕ್ಕಳಿಗೆ ಸ್ಟೀಲ್ ತಾಟು ವಿತರಣೆ ಮಾಡಿದರು.
ಸಿದ್ದಮ್ಮಅಡವೆನ್ನವರ, ಅನಸೂಯಾ ಪಾಟೀಲ, ಸಂತೋಷ ಶೆಟ್ಟಿ, ಡಾ. ಶರಣಪ್ಪ ಕೊಟಗಿ, ಬಸವರಾಜ ಸುಳ್ಳದ, ವಿ.ಜಿ. ಪಾಟೀಲ, ಸಂಜಯ ಧುಮಕನಾಳ, ಡಾ. ರಾಮು ಮೂಲಗಿ, ಸಾವಿತ್ರಿ ಹರನಾಳ, ಮಂಜುಳಾ ಸಾತಪುತೆ, ಕುಸುಮಾ ಚಕ್ರಸಾಲಿ, ಸೈನಾಬಿ ನದಾಫ, ವೇದಾ ನಾಗನೂರ, ರೂಪಾ ಹೆಬ್ಬಳ್ಳಿ ಮುಂತಾದವರು ಉಪಸ್ಥಿತರಿದ್ದರು.
ವೆಂಕಟೇಶ ಮರೆಗುದ್ದಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 11 ಸಾವಿರ ರೂ. ಚೆಕ್ ನೀಡಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಉಪಯೋಗಿಸಲು ತಿಳಿಸಿದರು.
ಡಾ. ಲಿಂಗರಾಜ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್.ಬಿ. ಕೊರವರ ಸ್ವಾಗತಿಸಿದರು. ಸುಭಾಸ ಚವಾಣ್ ನಿರೂಪಿಸಿದರು. ಚನ್ನಬಸಪ್ಪ ಧಾರವಾಡಶೆಟ್ರು ವಂದಿಸಿದರು.