ಒಂದೇ ಮನಸ್ಸಿನಿಂದ ಸೇರಿದಾಗ ದೊಡ್ಡ ದೇಣಿಗೆ - ಎಚ್.ಜಗನ್ನಾಥ ಸಾಲ್ಯಾನ್ - ಉಚಿತ ಶಿಕ್ಷಣಕ್ಕೆ ದತ್ತಿ ನಿಧಿ ನೀಡಿದ ದಾನಿಗಳ ಸಮಾಗಮ

PTR_4 SEP_4
Published on

ವಿಟ್ಲ: ಬ್ಯಾಂಕ್ ಊರಿನವರ ಹಣದ ವ್ಯವಹಾರದಿಂದ ಬಂದ ಲಾಭಾಂಶದಿಂದ ಕೊಡುಗೆ ನೀಡಲಾಗಿದೆ. ಎಲ್ಲರೂ ಒಂದೇ ಮನಸ್ಸಿನಿಂದ ಸೇರಿದಾಗ ದೊಡ್ಡ ದೇಣಿಗೆ ನೀಡಲು ಸಾಧ್ಯವಾಗಿದೆ. ಶಾಲೆಗೆ ಸಾಧ್ಯವಾಷ್ಟು ಮಟ್ಟಿಗೆ ಕೊಡುಗೆಯನ್ನು ನೀಡಲಾಗುವುದು ಎಂದು ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಚ್.ಜಗನ್ನಾಥ ಸಾಲಿಯಾನ್ ಹೇಳಿದರು.

ವಿಟ್ಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ವಿಠಲ ಎಜುಕೇಶನ್ ಸೊಸೈಟಿಯ ಉಚಿತ ಶಿಕ್ಷಣಕ್ಕೆ ದತ್ತಿನಿಧಿ ನೀಡಿದ ದಾನಿಗಳ ಸಮಾಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಿವೃತ್ತ ಪ್ರಾಂಶುಪಾಲ ಅನಂತಕೃಷ್ಣ ಹೆಬ್ಬಾರ್ ಮಾತನಾಡಿ, ನಿಶ್ಚಲವಾಗುವ ಹಣವನ್ನು ಶಿಕ್ಷಣಕ್ಕೆ ಬಳಸುವಂತಾಗಬೇಕು. ಹಣ ಸಂಗ್ರಹದ ಕೆಲಸ ಕಷ್ಟದ ಕೆಲಸವಾಗಿದೆ. ಹಣದ ಮೌಲ್ಯ ಕಡಿಮೆಯಾಗುತ್ತಿದ್ದಂತೆ, ಸಂಗ್ರಹದ ಮೊತ್ತ ಕಡಿಮೆಯಾಗುತ್ತದೆ. ಈ ಕಾರಣದಿಂದ ಅಭಿಯಾನ ಮುಂದುವರಿಸಬೇಕು ಎಂದು ತಿಳಿಸಿದರು.

ಶಾಲೆಯ ಅಮೃತ ಮಹೋತ್ಸವ ಅಂಗವಾಗಿ ನಡೆಯಲಿರುವ ಅಮೃತ ವರ್ಷಾಚರಣೆಯ ಲಾಂಛನವನ್ನು ವಿಟ್ಲ ಅರಮನೆಯ ಬಂಗಾರು ಅರಸರು ಬಿಡುಗಡೆಗೊಳಿಸಿದರು. ವಿಟ್ಠಲ ಪದವಿ ಪೂರ್ವ ಕಾಲೇಜು ಸಭಾಂಗಣಕ್ಕೆ ಗ್ರಾಮಿಣ ಬ್ಯಾಂಕ್‌ನಿಂದ ಕೊಡುಗೆಯಾಗಿ ನೀಡಲ್ಪಟ್ಟ ೨.೫ ಲಕ್ಷ ರೂ. ಮೌಲ್ಯದ -ನ್ ಲೋಕಾರ್ಪಣೆ ನಡೆಯಿತು. ಶಾಶ್ವತ ದತ್ತಿನಿಽಯಾಗಿ ೫೦ ಸಾವಿರ ರೂ.ಗೂ ಅಧಿಕ ಮೊತ್ತ ನೀಡಿದ ೫೮ ಮಂದಿಯನ್ನು ಗೌರವಿಸಲಾಯಿತು.

ವಿಟ್ಠಲ ಎಜುಕೇಶನ್ ಸೊಸೈಟಿ ಕೋಶಾಧಿಕಾರಿ ಬಾಬು ಕೆ.ವಿ., ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಮನೋರಂಜನ್ ಕರಾಯಿ, ಉದ್ಯಮಿ ಸುಬ್ರಾಯ ಪೈ, ವಿಟ್ಠಲ ಎಜುಕೇಶನ್ ಸೊಸೈಟಿ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್, ಉಪಾಧ್ಯಕ್ಷ ಅಲ್ಪಾನ್ಸ್ ಸಿಲ್ವೆಸ್ಟರ್ ಮಸ್ಕರೇನಸ್, ಕಾರ್ಯದರ್ಶಿ ರಾಧಾಕೃಷ್ಣ ನಾಯಕ್ ಉಪಸ್ಥಿತರಿದ್ದರು.

ಪ್ರೌಢಶಾಲೆ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಶಂಕರನಾರಾಯಣ ಪ್ರಸಾದ್ ಸಿಂಹಾವಲೋಕನ ನಡೆಸಿದರು. ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ದಾನಿಗಳ ಪಟ್ಟಿ ಓದಿದರು. ಪಿ.ಯು ಕಾಲೇಜು ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ವಂದಿಸಿದರು. ಉಪನ್ಯಾಸಕ ಶ್ರೀಹರಿ ಶರ್ಮ ಕಾರ್ಯಕ್ರಮ ನಿರೂಪಿಸಿದರು.

ದತ್ತಿನಿಧಿ ಸಂಗ್ರಹ ಸದ್ಯ ೧ ಕೋಟಿ ರೂ. ಮೀರಿದ್ದು, ಇದನ್ನು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಹೊರತು ಬೇರೆ ಉದ್ದೇಶಕ್ಕೆ ಬಳಕೆ ಮಾಡುವುದಿಲ್ಲ. ಶಾಲೆಯಲ್ಲಿ ಎಲ್ಲ ಧರ್ಮದವರನ್ನೂ ಒಂದೇ ರೀತಿಯಲ್ಲಿ ನೋಡುವ ಕಾರ್ಯ ಮಾಡಲಾಗುವುದು. ಉಚಿತ ಶಿಕ್ಷಣಕ್ಕಾಗಿ ಎಲ್ಲರ ಸಹಕಾರದಿಂದ ದೊಡ್ಡ ಮೊತ್ತದ ನಿಽ ಸಂಗ್ರಹ ಮಾಡಲಾಗಿದೆ.

| ಬಾಬು ಕೆ.ವಿ. ಕೋಶಾಧಿಕಾರಿ ವಿಟ್ಠಲ ಎಜುಕೇಶನ್ ಸೊಸೈಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net