

ಹುಬ್ಬಳ್ಳಿ: ಜನಪದರು, ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾತೋಶ್ರೀ ಅಂದಮ್ಮ ಸಿದ್ದನಗೌಡ ಜಕ್ಕನಗೌಡ್ರ ಸ್ಮರಣಾರ್ಥ ದತ್ತಿ ಕಾರ್ಯಕ್ರಮ ಉದ್ಘಾಟನೆ ಜೂನ್ 22ರಂದು ಸಂಜೆ 6ಕ್ಕೆ ಭೈರಿದೇವರಕೊಪ್ಪದ ಡಾ. ರಾಮು ಮೂಲಗಿ ಅವರ ಕಲ್ಪತರು ನಿಲಯ ಜಾನಪದ ಜಗಲಿಯಲ್ಲಿ ಏರ್ಪಡಿಸಲಾಗಿದೆ.
ಪ್ರಶಸ್ತಿ ಪ್ರದಾನ, ಉಪನ್ಯಾಸ, ಗಂಗಮ್ಮ ಗಿರಿಯಪ್ಪಗೌಡ ಬಾಳನಗೌಡರ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಮಕ್ಕಳಿಗೆ ಕಲಿಕಾ ಸಾಮಗ್ರಿ ಹಾಗೂ ಸಮವಸ್ತ್ರ ವಿತರಣೆ ನಡೆಯಲಿದೆ. ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ದತ್ತಿ ಉದ್ಘಾಟನೆ ನೆರವೇರಿಸುವರು.
ಜೀವಿ ಕಲಾ ಬಳಗದ ಗದಿಗಯ್ಯ ಹಿರೇಮಠ ಅವರಿಗೆ ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಟಿ. ತವನಪ್ಪನವರ ದತ್ತಿ ಪ್ರಶಸ್ತಿ ಪ್ರದಾನ ಮಾಡುವರು. ಡಾ. ಸಂಗಮನಾಥ ಲೋಕಾಪುರ ದತ್ತಿ ಉಪನ್ಯಾಸ ನೀಡುವರು.
ಡಾ. ಶಾಂತಣ್ಣ ಕಡಿವಾಲ ಅಧ್ಯಕ್ಷತೆ ವಹಿಸುವರು. ಉದ್ಯಮಿ ಬಸವರಾಜ ಸುಳ್ಳದ, ವಿಮಲ ತಾಳಿಕೋಟಿ, ಡಾ. ಡಿ.ಎಂ. ಹಿರೇಮಠ, ಡಾ. ಎಚ್.ವಿ. ಬೆಳಗಲಿ ಇತರರು ಪಾಲ್ಗೊಳ್ಳುವರು. ದತ್ತಿ ದಾನಿಗಳಾದ ಶಾಂತಾ ಸಂಗನಗೌಡ ಜಕ್ಕನಗೌಡ್ರ ಹಾಗೂ ಇತರ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.