

ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆ ನಗರದ ಅಪರ್ಣಾ ಅಪಾರ್ಟ್‌ಮೆಂಟ್ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀಗುರು ದತ್ತಾತ್ರೇಯ ದೇವರ ನಾಲ್ಕು ಕೈಗಳನ್ನು ದುಷ್ಕರ್ಮಿಗಳು ಭಾನುವಾರ ಬೆಳಗಿನ ಜಾವ ಭಗ್ನಗೊಳಿಸಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಶಾಸಕ ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ಬಿಜೆಪಿ ವಕ್ತಾರ ರವಿ ನಾಯ್ಕ, ಹಿಂದುಪರ ಸಂಘಟನೆಯ ಗಂಗಾಧರ ಸಂಗಮಶೆಟ್ಟರ, ಶಿವಾನಂದ ಸತ್ತಿಗೇರಿ, ಅಪಾರ್ಟ್‌ಮೆಂಟ್ ಕಾರ್ಯದರ್ಶಿ ರೇಣುಕಾ ಗೆಜ್ಜಿಹಳ್ಳಿ ಮತ್ತು ಸ್ಥಳೀಯರು ಜಮಾಯಿಸಿದ್ದರು.
ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಡಿಸಿಪಿ ಮಹಾನಿಂಗ ನಂದಗಾವಿ, ಉಪನಗರ ಠಾಣೆ ಇನ್ಸ್‌ಪೆಕ್ಟರ್ ಎಂ.ಎಸ್. ಹೂಗಾರ ಭೇಟಿ ನೀಡಿ ಪರಿಶೀಲಿಸಿದರು. ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳ ಪರಿಶೀಲಿಸಿದರು.
ದಸರಾ ಉತ್ಸವ ಅಂಗವಾಗಿ ನಿವಾಸಿಗಳು ರಾತ್ರಿ ಒಂದು ಗಂಟೆವರೆಗೂ ದಾಂಡಿಯಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಪಾರ್ಟ್‌ಮೆಂಟ್ ಆವರಣದಲ್ಲಿ ದತ್ತಾತ್ರೇಯ ಮೂರ್ತಿಯನ್ನು 2011ರಲ್ಲಿ ಪ್ರತಿಷ್ಠಿಸಲಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.