ದತ್ತಮಂದಿರ ಗರ್ಭಗುಡಿ ಲೋಕಾರ್ಪಣೆ ಡಿ. 13ರಿಂದ

19 ylp shivaram hebbar
Published on

ಯಲ್ಲಾಪುರ: ಪಟ್ಟಣದ ನಾಯಕನಕೆರೆಯಲ್ಲಿ ಮೂರು ಕೋಟಿ ರೂ. ವೆಚ್ಚದಲ್ಲಿ ದತ್ತಮಂದಿರ ರಾಮಚಂದ್ರಾಪುರ ಮಠದ ಶ್ರೀಗಳ ಆಶೀರ್ವಾದದಿಂದ ನೂತನ ಶಿಲಾಮಯ ದೇವಸ್ಥಾನದ ಕೆಲಸ ಭರದಿಂದ ಸಾಗಿದ್ದು, ಡಿ. 13ರಿಂದ 15ರವರೆಗೆ ಅದ್ದೂರಿಯಾಗಿ ಗರ್ಭಗುಡಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ, ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 27ರಿಂದ ಹತ್ತು ದಿವಸ ರಥಯಾತ್ರೆ ಆಯೋಜಿಸಲಾಗಿದೆ. ತಾಲೂಕಿನ ವಿವಿಧ ದೇವಸ್ಥಾನಗಳ ತೀರ್ಥ ಸಂಗ್ರಹಣೆ ನಡೆಯಲಿದೆ. ಈಗಾಗಲೇ ದ್ವಾದಶ ಜ್ಯೋತಿರ್ಲಿಂಗಗಳ ತೀರ್ಥ ತರಲಾಗಿದ್ದು, ಪ್ರತಿಷ್ಠಾಪನಾ ಕಾರ್ಯದಲ್ಲಿ ಬಳಸಲಾಗುತ್ತದೆ ಎಂದರು.

ದೇಣಿಗೆ ಸಂಗ್ರಹದ ಜತೆಗೆ ದತ್ತ ಭಿಕ್ಷಾ ಅಭಿಯಾನ ನಡೆಯಲಿದೆ. ರಾಮಚಂದ್ರಾಪುರ ಮಠದ ಶ್ರೀಗಳ ಮಾರ್ಗದರ್ಶನದಲ್ಲಿ ಪ್ರಸಿದ್ಧ ಶಿಲ್ಪಿಗಳು ಮೂರ್ತಿ ತಯಾರಿಸಿದ್ದು, ಈಗಾಗಲೇ ನೂತನ ಮೂರ್ತಿ ಯಲ್ಲಾಪುರಕ್ಕೆ ಆಗಮಿಸಿದೆ. ಕಟ್ಟಡದ ಕೆಲಸಗಳು ಭರದಿಂದ ಸಾಗಿದೆ. ವಿವಿಧ ಧಾರ್ವಿುಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದರು.

ದೇವಸ್ಥಾನ ನಿರ್ಮಾಣ ಸಮಿತಿಯ ಪ್ರಮುಖರಾದ ಎಸ್.ವಿ. ಯಾಜಿ, ಮಹೇಶ ಚಟ್ನಳ್ಳಿ, ಶ್ರೀರಂಗ ಕಟ್ಟಿ, ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ಪ್ರಮೋದ ಹೆಗಡೆ, ನಾಗೇಶ ಯಲ್ಲಾಪುರಕರ, ಶಾಂತಾರಾಮ ಹೆಗಡೆ, ಮುರಳಿ ಹೆಗಡೆ, ಸಿ.ಜಿ. ಹೆಗಡೆ, ಪ್ರಸಾದ ಹೆಗಡೆ, ನಾರಾಯಣ ನಾಯಕ, ಕೆ.ಟಿ. ಹೆಗಡೆ, ನಾಗರಾಜ ಮದ್ಗುಣಿ, ಮಹೇಶ ಗೌಳಿ, ಶಿವಾನಂದ ಹೆಗಡೆ, ವೇಣುಗೋಪಾಲ ಮದ್ಗುಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net