ಬ್ರಹ್ಮ ಚೈತನ್ಯ ಮಹಾರಾಜರ 111ನೇ ಪುಣ್ಯಾರಾಧನೆ

dj clk pooje
Published on

ಚಳ್ಳಕೆರೆ: ಇಲ್ಲಿನ ತ್ಯಾಗರಾಜ ನಗರದಲ್ಲಿರುವ ದತ್ತ ಮಂದಿರದಲ್ಲಿ ಬುಧವಾರ ವಿಶೇಷ ಪೂಜಾ ಕಾರ್ಯಕ್ರಮಗಳೊಂದಿಗೆ ಸದ್ಗುರು ಬ್ರಹ್ಮ ಚೈತನ್ಯ ಮಹಾರಾಜರ 111ನೇ ಪುಣ್ಯಾರಾಧನಾ ಮಹೋತ್ಸವ ನೆರವೇರಿಸಲಾಯಿತು.

ಭಕ್ತರಿಂದ ಬೆಳಗ್ಗೆ 5 ಗಂಟೆಯಿಂದ ಆರಂಭಗೊಂಡ ಮಹೋತ್ಸವ ಕಾರ್ಯಕ್ರಮದಲ್ಲಿ ಜಪ, ಜುಲಾಲ್ ಪ್ರವಚನ, ಮಹಾರಾಜರ ಪಾದುಕೆಗಳಿಗೆ ಪೂಜೆ, ಆರತಿ ಸಮರ್ಪಣೆ, ಬಳಿಕ ಬ್ರಹ್ಮ ಚೈತನ್ಯ ಮಹಾರಾಜರ ದಿವ್ಯ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ನಡೆಯಿತು.

ಈ ವೇಳೆ ನಡೆದ ಪ್ರವಚನದಲ್ಲಿ ಶಾರದಾಶ್ರಮದ ತ್ಯಾಗಮಯಿ ಮಾತನಾಡಿ, ಮಹಾರಾಷ್ಟ್ರದ ಸತಾರ ಜಿಲ್ಲೆಯ ಮಾಣಗಂಗಾನದಿ ತಟದಲ್ಲಿನ ಗೋಂದಾವಲೆ ಗ್ರಾಮದಲ್ಲಿ ಬ್ರಹ್ಮ ಚೈತನ್ಯ ಮಹಾರಾಜರು ಜನಿಸಿದರು. ಜೀವನಪೂರ್ತಿ ಭಾರತವನ್ನು ಕಾಲ್ನಡಿಗೆಯಲ್ಲಿ ಸುತ್ತಿ ರಾಮನಾಮ ಪ್ರಸಾರ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಭಗವಂತನ ನಾಮ ಸ್ಮರಣೆಯಲ್ಲೇ ಮಹಾರಾಜರ ದರ್ಶನ ಪಡೆದುಕೊಳ್ಳಬಹುದು. ಧಾರ್ವಿುಕ ಭಕ್ತಿಭಾವ ಸ್ಥಾಪನೆಗೆ ಜೀವನ ಅರ್ಪಿಸಿಕೊಂಡ ಮಹನೀಯರ ಸ್ಮರಣೆಯೇ ಭಗವಂತನ ಆರಾಧನೆ ಆಗಿರುತ್ತದೆ ಎಂದು ಹೇಳಿದರು.

ಪೂಜಾ ಕಾರ್ಯಕ್ರಮದಲ್ಲಿ ಧಾರ್ವಿುಕ ಸಮಿತಿ ಅಧ್ಯಕ್ಷ ರವೀಂದ್ರನಾಥ್, ಕಾರ್ಯದರ್ಶಿ ಪ್ರಕಾಶ್, ವೆಂಕಟಸುಬ್ಬಯ್ಯ ಶೆಟ್ಟಿ, ಎ.ಎಸ್. ಸುಬ್ರಹ್ಮಣ್ಯ, ಬಾಬುರಾಜೇಂದ್ರ ಪ್ರಸಾದ್, ಗೋಪಿನಾಥ್, ಸುಮಾಪ್ರಕಾಶ್, ಅನುಸೂಯ, ರಾಧಾಲಕ್ಷ್ಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net