ದತ್ತ ಮಹಾರಾಜರ ತೊಟ್ಟಿಲೋತ್ಸವ

Datta Maharaja's cradle festival
ವಿಜಯಪುರದ ನರಸಿಂಹ ದೇವಸ್ಥಾನದಲ್ಲಿ ಶ್ರೀ ನರಸಿಂಹದೇವ ಟ್ರಸ್ಟ್ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯಿಂದ ದತ್ತ ಜಯಂತಿ ಪ್ರಯುಕ್ತ ದತ್ತ ಮಹಾರಾಜರ ತೊಟ್ಟಿಲೋತ್ಸವ ನಡೆಯಿತು. ಉಮೇಶ ಉಪಾಧ್ಯಾಯ, ಮಹೇಂದ್ರ ಪೂಜಾರಿ ಮತ್ತಿತರರಿದ್ದಾರೆ.
Published on

ವಿಜಯಪುರ : ನಗರದ ಐತಿಹಾಸಿಕ ನರಸಿಂಹ ದೇವಸ್ಥಾನದಲ್ಲಿ ಶ್ರೀ ನರಸಿಂಹದೇವ ಟ್ರಸ್ಟ್ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯಿಂದ ದತ್ತ ಜಯಂತಿ ಪ್ರಯುಕ್ತ ಶುಕ್ರವಾರ ದತ್ತ ಮಹಾರಾಜರ ತೊಟ್ಟಿಲೋತ್ಸವ ನಡೆಯಿತು.

ಔರಂಗಬಾದನ ಕೀರ್ತನಕಾರ ಉಮೇಶ ಉಪಾಧ್ಯಾಯ ಮಾತನಾಡಿ, ತ್ರೈಮೂರ್ತಿ ಅವತಾರ ತಾಳಿ ಜನರ ಭವ- ಬಂಧನಗಳನ್ನು ಪರಿಹರಿಸಿ ಭೂಲೋಕವನ್ನು ಉದ್ಧರಸಿದವರು ಶ್ರೀ ದತ್ತ ಗುರುವರ್ಯರು. ದತ್ತ ಮಹಾರಾಜರ ಅವತಾರವಾದ ಶ್ರೀ ನರಸಿಂಹ ಸರಸ್ವತಿ ಯತಿಗಳ ಪವಿತ್ರ ಪಾದುಕೆ ಹಾಗೂ ಉದ್ಭವ ನರಸಿಂಹ ದೇವರು ನೆಲೆಸಿರುವ ತೀರ್ಥ ಕ್ಷೇತ್ರದಲ್ಲಿ ಶತಮಾನಗಳಿಂದ ದತ್ತ ಜಯಂತಿ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.

ಅರ್ಚಕರಾದ ಮಹೇಂದ್ರ ಪೂಜಾರಿ, ಬಸವರಾಜ ಪೂಜಾರಿ, ಪ್ರವೀಣ ಪೂಜಾರಿ ಪ್ರಾರ್ಥಿಸಿದರು. ನೆರೆಯ ಮಹಾರಾಷ್ಟ್ರ, ಆಂಧ್ರ, ತೆಲಂಗಾಣದಿಂದ ಅಪಾರ ಭಕ್ತರು ಆಗಮಿಸಿದ್ದರು.

ಸಮಿತಿ ಅಧ್ಯಕ್ಷ ಸುಭಾಸ ಪೂಜಾರಿ, ಶಿವಾನಂದ ಅಣ್ಣೆಪ್ಪನವರ, ಮಹಾದೇವಿ ಪೂಜಾರಿ, ಶಿವಶರಣ ಕಲ್ಲೂರ, ವಿರೇಂದ್ರ ಪಾಟೀಲ, ರಮೇಶ ಬನಹಟ್ಟಿ, ಪುಷ್ಪಾ ಬಿರಾದಾರ, ರಮೇಶ ಹಳ್ಳದ, ವಿಶ್ವನಾಥ ಭೋಗಶೆಟ್ಟಿ, ಗುರುಲಿಂಗಪ್ಪ ಸಜ್ಜನ, ಸಾಯಿಬಾಬಾ ಸಿಂದಗೇರಿ, ಅನಿಲ ಜಾಧವ, ಅಶೋಕ ಅಣ್ಣೆಪ್ಪನವರ, ಪಾರ್ವತಿ ಪೂಜಾರಿ, ಸುನಂದಾ ಪೂಜಾರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net