

ಸವಣೂರ: ಪಟ್ಟಣದ ಶ್ರೀ ಚಿದಂಬರ ದೇವಸ್ಥಾನದಲ್ಲಿ 11ನೇ ವರ್ಷದ ದತ್ತ ಜಯಂತಿ ಹಾಗೂ ಗುರು ಚರಿತ್ರೆ ಪಾರಾಯಣ ಕಾರ್ಯಕ್ರಮ ಭಾನುವಾರ ಸಂಪನ್ನಗೊಂಡಿತು.
ಎರಡು ದಿನದ ಕಾರ್ಯಕ್ರಮದಲ್ಲಿ ಶ್ರೀದತ್ತ ರಾಜರ ತೊಟ್ಟಿಲೋತ್ಸವ, ನಾಮಕರಣ ಹಾಗೂ ಮಧುಕರಿ ಸೇವೆ ನೆರವೇರಿತು.
ಭಾನುವಾರ ಬೆಳಗ್ಗೆ ದತ್ತಾತ್ರೇಯ ಸನ್ನಿಧಿಯಲ್ಲಿ ಪಂಚಾಮೃತ ಅಭಿಷೇಕ, ಅಲಂಕಾರ, ಮಧುಕರಿ ಸೇವೆ, ಗುರುಚರಿತ್ರೆ ಪಾರಾಯಣ, ತೀರ್ಥ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಧಾರ್ವಿುಕ ವಿಧಿ- ವಿಧಾನ ಕೈಗೊಳ್ಳಲಾಯಿತು.
ಪ್ರಮುಖರಾದ ರವಿ ಜೋಶಿ, ಎಂ.ಜಿ. ಕುಲಕರ್ಣಿ, ನಾಗೇಶ ಪಾಟೀಲ, ಶ್ರೀನಿವಾಸ ಖಾರದ, ಜಯತೀರ್ಥ ದೇಶಪಾಂಡೆ, ನಾರಾಯಣಗೌಡ ಪಾಟೀಲ, ಈಶಣ್ಣ ಸಾಹುಕಾರ, ಅನಿಲ ತಿಳುವಳ್ಳಿ, ವಿಪ್ರ ಮಹಿಳೆಯರ ಭಜನಾ ಮಂಡಳಿ ಸದಸ್ಯರು ಹಾಗೂ ಇತರರು ಪಾಲ್ಗೊಂಡಿದ್ದರು.ಔದುಂಬರೇಶ್ವರ ಸನ್ನಿಧಿಯ ಅರ್ಚಕರಾದ ನಾಗರಾಜ ಸಾರಥರಾಮ, ವಿನಾಯಕ ಸಾರಥರಾಮ ಅವರು ಧಾರ್ವಿುಕ ಆಚರಣೆಗಳನ್ನು ಕೈಗೊಂಡರು. ಮನೋಜ ಕುಲಕರ್ಣಿ, ಮಂಜುನಾಥ ಶರ್ಮ ಹಾಗೂ ವಿಶಾಲ ಸಾರಥರಾಮ ನಿರ್ವಹಿಸಿದರು.