ದಾಸ್ತಿಕೊಪ್ಪ ಗ್ರಾಪಂ ಕಾರ್ಯ ಮಾದರಿ

9mkh1
Published on

ಎಂ.ಕೆ.ಹುಬ್ಬಳ್ಳಿ: ಶಿಥಿಲಗೊಂಡಿದ್ದ ಕೊಠಡಿ ನವೀಕರಿಸಿ ಗ್ರಾಮಸ್ಥರ ಅನುಕೂಲಕ್ಕಾಗಿ ಇತರ ಇಲಾಖೆಗಳ ಕಾರ್ಯಕ್ಕೆ ನೀಡಿದ ದಾಸ್ತಿಕೊಪ್ಪ ಗ್ರಾಮ ಪಂಚಾಯಿತಿ ಕಾರ್ಯ ಮಾದರಿಯಾಗಿದೆ ಎಂದು ತಹಸೀಲ್ದಾರ್​ ಕಲಗೌಡ ಪಾಟೀಲ ಹೇಳಿದರು.

ಸಮೀಪದ ದಾಸ್ತಿಕೊಪ್ಪ ಗ್ರಾಮದಲ್ಲಿ ಗ್ರಾಪಂ ಸ್ವಂತ ಸಂಪನ್ಮೂಲದಲ್ಲಿ ನವೀಕರಿಸಿದ ಕೊಠಡಿಗಳಲ್ಲಿ ಆರಂಭಿಸಿದ ಗ್ರಾಮ ಆಡಳಿತಾಧಿಕಾರಿಗಳ ಕಚೇರಿ, ಅಂಚೆ ಕಚೇರಿ, ವ್ಯಾಯಾಮ ಶಾಲೆ ಮತ್ತು ಎನ್​ಆರ್​ಎಲ್​ಎಂ ಮಹಿಳಾ ಸಂ ಕಚೇರಿಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.| ಗ್ರಾಮ ಪಂಚಾಯತಿಯ ಎಲ್ಲ ಸದಸ್ಯರು ಒಗ್ಗೂಡಿ ಗ್ರಾಮದ ಅಭಿವೃದ್ಧಿಗೆ ಮುಂದಾಗಿರುವುದು ಶ್ಲಾನೀಯ. ತಾಲೂಕಿನ ಜನರ ಸಮಸ್ಯೆಗಳೇನಿದ್ದರೂ ನೇರವಾಗಿ ಸಂಪರ್ಕಿಸಬೇಕು. ಶ್ರೀವೇ ತಾಲೂಕಾಡಳಿತ ಪರಿಹಾರ ಒದಗಿಸಲಿದೆ ಎಂದರು.

ರುದ್ರಯ್ಯ ಹಿರೇಮಠ, ಗ್ರಾಪಂ ಅಧ್ಯೆ ವಿಜಯಲಕ್ಷಿ$್ಮ ತಿಗಡಿ, ಉಪಾಧ್ಯ ಉಮೇಶ ಶಿದ್ರಾಮನಿ, ಸದಸ್ಯ ಈರಪ್ಪ ಶಿದ್ದನವರ, ಈರಪ್ಪ ಮೇಲಸರ್ಜಿ, ಸಲ್ಮಾ ನಧಾಪ್​, ಉಷಾ ತಳವಾರ, ಕಂದಾಯ ನಿರೀಕ ಎಂ.ಎಂ.ನಿರಲಗಿ, ಗ್ರಾಮ ಆಡಳಿತಾಧಿಕಾರಿ ತೇಜಸ್ವಿನಿ ಮಾಸೇಕರ್​, ಬಸನಗೌಡ ಶಿದ್ರಾಮನಿ, ಬಿ.ಕೆ.ಪಾಟೀಲ, ಅದೃಶ್ಯಗೌಡ ಪಾಟೀಲ, ರುದ್ರಗೌಡ ಶಿದ್ದನವರ, ಬಾಬು ಮೇಲಸರ್ಜಿ, ವೆಂಕಪ್ಪ ರಾವಳ ಇತರರಿದ್ದರು. ಪಿಡಿಒ ಜಯರಾಮ ಕಾದ್ರೊಳ್ಳಿ ಸ್ವಾಗತಿಸಿ, ಶಿಕ ಎಸ್​.ಐ.ಶಿದ್ರಾಮನಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net