

ಎಂ.ಕೆ.ಹುಬ್ಬಳ್ಳಿ: ಶಿಥಿಲಗೊಂಡಿದ್ದ ಕೊಠಡಿ ನವೀಕರಿಸಿ ಗ್ರಾಮಸ್ಥರ ಅನುಕೂಲಕ್ಕಾಗಿ ಇತರ ಇಲಾಖೆಗಳ ಕಾರ್ಯಕ್ಕೆ ನೀಡಿದ ದಾಸ್ತಿಕೊಪ್ಪ ಗ್ರಾಮ ಪಂಚಾಯಿತಿ ಕಾರ್ಯ ಮಾದರಿಯಾಗಿದೆ ಎಂದು ತಹಸೀಲ್ದಾರ್ ಕಲಗೌಡ ಪಾಟೀಲ ಹೇಳಿದರು.
ಸಮೀಪದ ದಾಸ್ತಿಕೊಪ್ಪ ಗ್ರಾಮದಲ್ಲಿ ಗ್ರಾಪಂ ಸ್ವಂತ ಸಂಪನ್ಮೂಲದಲ್ಲಿ ನವೀಕರಿಸಿದ ಕೊಠಡಿಗಳಲ್ಲಿ ಆರಂಭಿಸಿದ ಗ್ರಾಮ ಆಡಳಿತಾಧಿಕಾರಿಗಳ ಕಚೇರಿ, ಅಂಚೆ ಕಚೇರಿ, ವ್ಯಾಯಾಮ ಶಾಲೆ ಮತ್ತು ಎನ್ಆರ್ಎಲ್ಎಂ ಮಹಿಳಾ ಸಂ ಕಚೇರಿಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರು ಒಗ್ಗೂಡಿ ಗ್ರಾಮದ ಅಭಿವೃದ್ಧಿಗೆ ಮುಂದಾಗಿರುವುದು ಶ್ಲಾನೀಯ. ತಾಲೂಕಿನ ಜನರ ಸಮಸ್ಯೆಗಳೇನಿದ್ದರೂ ನೇರವಾಗಿ ಸಂಪರ್ಕಿಸಬೇಕು. ಶ್ರೀವೇ ತಾಲೂಕಾಡಳಿತ ಪರಿಹಾರ ಒದಗಿಸಲಿದೆ ಎಂದರು.
ರುದ್ರಯ್ಯ ಹಿರೇಮಠ, ಗ್ರಾಪಂ ಅಧ್ಯೆ ವಿಜಯಲಕ್ಷಿ$್ಮ ತಿಗಡಿ, ಉಪಾಧ್ಯ ಉಮೇಶ ಶಿದ್ರಾಮನಿ, ಸದಸ್ಯ ಈರಪ್ಪ ಶಿದ್ದನವರ, ಈರಪ್ಪ ಮೇಲಸರ್ಜಿ, ಸಲ್ಮಾ ನಧಾಪ್, ಉಷಾ ತಳವಾರ, ಕಂದಾಯ ನಿರೀಕ ಎಂ.ಎಂ.ನಿರಲಗಿ, ಗ್ರಾಮ ಆಡಳಿತಾಧಿಕಾರಿ ತೇಜಸ್ವಿನಿ ಮಾಸೇಕರ್, ಬಸನಗೌಡ ಶಿದ್ರಾಮನಿ, ಬಿ.ಕೆ.ಪಾಟೀಲ, ಅದೃಶ್ಯಗೌಡ ಪಾಟೀಲ, ರುದ್ರಗೌಡ ಶಿದ್ದನವರ, ಬಾಬು ಮೇಲಸರ್ಜಿ, ವೆಂಕಪ್ಪ ರಾವಳ ಇತರರಿದ್ದರು. ಪಿಡಿಒ ಜಯರಾಮ ಕಾದ್ರೊಳ್ಳಿ ಸ್ವಾಗತಿಸಿ, ಶಿಕ ಎಸ್.ಐ.ಶಿದ್ರಾಮನಿ ನಿರೂಪಿಸಿದರು.