ಸಂಭ್ರಮದ ದಾಸ್ತಿಕೊಪ್ಪ ಜಾತ್ರೆ

5mkh1
Published on

ಎಂ.ಕೆ.ಹುಬ್ಬಳ್ಳಿ: ಸಮೀಪದ ದಾಸ್ತಿಕೊಪ್ಪ ಗ್ರಾಮದಲ್ಲಿ ಮಾ.28ರಿಂದ ಆರಂಭಗೊಂಡಿರುವ ಶ್ರೀ ಗ್ರಾಮದೇವಿಯರ ಹಾಗೂ ಬಸವೇಶ್ವರ ಜಾತ್ರಾ ಮಹೋತ್ಸವ ಭಕ್ತಿ-ಸಂಭ್ರಮದಿಂದ ಜರುಗುತ್ತಿದ್ದು, ಹೊನ್ನಾಟದ ಸಂಭ್ರಮ ಕಣ್ಮನ ಸೆಳೆಯುತ್ತಿದೆ.

ದೇವಿಯರ ಹೊನ್ನಾಟದಿಂದ ಗ್ರಾಮವೆಲ್ಲ ಭಂಡಾರಮಯವಾಗಿದ್ದು, ಜಾತ್ರಾ ಮಹೋತ್ಸವಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಜಾತ್ರೆಗೆ ಬರುವ ಅತಿಥಿಗಳನ್ನು ಆತ್ಮಿಯವಾಗಿ ಸ್ವಾಗತಿಸುವಲ್ಲಿ ಗ್ರಾಮಸ್ಥರು ನಿರತರಾಗಿದ್ದು, ಜಾತ್ರೆ ಸಂಭ್ರಮ ಇಮ್ಮಡಿಗೊಳಿಸಿದೆ. ಪ್ರತಿದಿನ ದೇವಿಯರಿಗೆ ವಿಶೇಷ ಪೂಜೆ, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿವೆ. ದೇವಿಯರ ಹೊನ್ನಾಟ ವೀಕ್ಷಿಸಲು ಜನಸಾಗರವೇ ಬರುತ್ತಿದೆ.

ಮಾ.28ರಿಂದ ಏ.5ರ ವರೆಗೆ ನಿಗದಿಗೊಳಿಸಲಾಗಿದ್ದ ಗ್ರಾಮದೇವಿ ಜಾತ್ರೆಯನ್ನು ಭಕ್ತರ ಒತ್ತಾಯದ ಮೆರೆಗೆ ಒಂದು ದಿನ ಹೆಚ್ಚಿಸಲಾಗಿದೆ. ಏ.6ರಂದು ಸಹ ಜಾತ್ರೆ ನಡೆಸಲು ನಿರ್ಧರಿಸಲಾಗಿದೆ ಎಂದು ಜಾತ್ರಾ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net