

ಹುಬ್ಬಳ್ಳಿ : ಇಲ್ಲಿನ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಸೋಮವಾರ ದಾಸಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಆಚರಿಸಲಾಯಿತು.
ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಪಿ.ಆರ್. ಕಿರಣಗಿ, ಕನಕದಾಸರು ಯಾವುದೇ ಒಂದು ಜಾತಿ, ಮತ, ಪಂಥ, ಪ್ರದೇಶ ಹಾಗೂ ಭಾಷೆಗೆ ಸೀಮಿತವಾಗದೆ ವಿಶ್ವಮಾನವ ಸಂದೇಶಗಳನ್ನು ನೀಡಿದ್ದಾರೆ. ಮೋಹನ ತರಂಗಿಣಿ, ನಳ ಚರಿತ್ರೆ, ಹರಿಭಕ್ತಿಸಾರ, ರಾಮಧಾನ್ಯ ಚರಿತ್ರೆ ಎಂಬ ಕಾವ್ಯಗಳು ಹಾಗೂ ಕೀರ್ತನೆಗಳ ಮೂಲಕ ಅವರು ಸಮಾಜದಲ್ಲಿ ಸಮಾನತೆ ಮೂಡಿಸುವ, ಸಮಾಜದ ಅಂಕá-ಡೊಂಕು ತಿದ್ದುವ ಸಂದೇಶಗಳನ್ನು ನೀಡಿದ್ದಾರೆ ಎಂದರು.
ಬದುಕಿನ ತತ್ವಗಳಿಗೆ ಕಾವ್ಯದ ಸೊಗಡನ್ನು ನೀಡಿ ಸಾರ್ವಕಾಲಿಕ ಸತ್ಯವನ್ನು ತಮ್ಮ ಸಾಹಿತ್ಯದ ಮೂಲಕ ತಿಳಿಸಿದ್ದಾರೆ. ಅವರ ಜೀವನ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಸಂಚಾರ ವ್ಯವಸ್ಥಾಪಕ ವಿವೇಕಾನಂದ ವಿಶ್ವಜ್ಞ ಮಾತನಾಡಿ, ಸಮಾಜದಲ್ಲಿರುವ ಅಸಮಾನತೆ ಹೋಗಲಾಡಿಸಿ ಸಮಾನತೆ ತರಬೇಕು ಎಂಬುದು ಕನಕದಾಸರ ಜೀವನದ ಧ್ಯೇಯವಾಗಿತ್ತು ಎಂದರು.
ಇಲಾಖಾ ಮುಖ್ಯಸ್ಥರಾದ ಪಿ.ವೈ. ನಾಯಕ, ವಿಜಯಶ್ರೀ ನರಗುಂದ, ಇಸ್ಮಾಯಿಲ್ ಕಂದಗಲ್ಲ, ಅಧಿಕಾರಿಗಳಾದ ಎಂ.ಡಿ. ಸುಂಕದ, ದಯಾನಂದ ಪಾಟೀಲ, ಕಾರ್ವಿುಕ ಮುಖಂಡರಾದ ಆರ್.ಎಫ್. ಕವಳಿಕಾಯಿ, ಕೇಂದ್ರ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು. ವಿರೂಪಾಕ್ಷ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.