ದೈಹಿಕ ಸದೃಢತೆಗೆ ಕ್ರೀಡೆ ಅವಶ್ಯ: ಸಂಸದ ರಾಜಶೇಖರ

dassera sports mp koppal rajashekhar hitnal inaugurates
Published on

ಕೊಪ್ಪಳ: ಯುವಕರು ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು. ಕ್ರೀಡೆಯಲ್ಲಿ ತೊಡಗುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದೆಂದು ಸಂಸದ ರಾಜಶೇಖರ ಹಿಟ್ನಾಳ ಅನಿಸಿಕೆ ವ್ಯಕ್ತಪಡಿಸಿದರು.

ಜಿಲ್ಲಾಡಳಿತದಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಶಿಸ್ತು, ಏಕಾಗ್ರತೆ ವೃದ್ಧಿಸುತ್ತದೆ. ದೇಹ ಧಣಿಯುವುದರಿಂದ ಮಾನಸಿಕ ಆರೋಗ್ಯವೂ ಉತ್ತಮವಾಗಿರಲಿದೆ. ಜೀವನದಲ್ಲಿ ಆತ್ಮಸ್ಥೆರ್ಯ ಹೆಚ್ಚಲಿದೆ. ಸೋಲು&ಗೆಲುವು ಸಾಮಾನ್ಯ. ಭಾಗವಹಿಸುವಿಕೆ ಮುಖ್ಯ. ಜಿಲ್ಲೆಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ. ವಿಭಾಗ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತನ್ನಿ ಎಂದರು.

ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಮಾತನಾಡಿ, ಪಠ್ಯದೊಂದಿಗೆ ಕ್ರೀಡಾಕೂಟದಲ್ಲೂ ಭಾಗಿಯಾಬೇಕು. ಕ್ರೀಡೆಯಲ್ಲೂ ಸಾಧನೆಗೆ ಅವಕಾಶವಿದೆ. ಕೇವಲ ಕ್ರೀಡಾಕೂಟ ಇದ್ದಾಗ ಭಾಗವಹಿಸಬೇಡಿ. ನಿತ್ಯ ಜೀವನದಲ್ಲಿ ಕ್ರೀಡೆ ಒಂದು ಭಾಗವಾಗಿರಲಿ. ಸ್ಪರ್ಧಿಗಳೆಲ್ಲ ಉತ್ತಮ ಪ್ರದರ್ಶನ ತೋರಿಸಿ. ನಮ್ಮ ಜಿಲ್ಲೆಯಲ್ಲಿ ಉತ್ತಮ ಕ್ರೀಡಾಪಟುಗಳಿದ್ದಾರೆ. ವಿಭಾಗ, ರಾಜ್ಯಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುವರೆಂಬ ವಿಶ್ವಾಸವಿದೆ. ಕ್ರೀಡಾಪಟುಗಳ ಆರೋಗ್ಯದಲ್ಲಿ ವ್ಯತ್ಯಾಸವಾದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ. ರ್ನಿಲಕ್ಷ$್ಯ ಸಲ್ಲದು. ನಿರ್ಣಾಯಕರ ತೀರ್ಮಾನಕ್ಕೆ ತಲೆಭಾಗಿ. ಗೊಂದಲ ಉಂಟಾದರೆ ಸಂಯಮದಿಂದ ಪರಿಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಜಿಲ್ಲಾ ಕ್ರೀಡಾ ಅಧಿಕಾರಿ ವಿಠ್ಠಲ ಜಾಬಗೌಡರ ಮಾತನಾಡಿ, ಎರಡು ದಿನ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಆಯೋಜಿಸಲಾಗಿದೆ. ಸೋಲು&ಗೆಲುವು ಕ್ರೀಡೆ ಅವಿಭಾಜ್ಯ ಅಂಗ. ಹೆಚ್ಚಿನ ಕ್ರೀಡಾಪಟುಗಳು ಭಾಗವಹಿಸಿ. ರ್ನಿಣಯದಲ್ಲಿ ಗೊಂದಲವಿದ್ದರೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತನ್ನಿ. ಹೆಚ್ಚಿನ ಸಂಖ್ಯೆಯ ಕ್ರೀಡಾಪಟುಗಳು ವಿಭಾಗಮಟ್ಟಕ್ಕೆ ಆಯ್ಕೆಯಾಗುವಂತೆ ಹರಸಿದರು.

ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಎ.ಬಸವರಾಜ, ತಾಲೂಕು ಕ್ರೀಡಾಧಿಕಾರಿ ಶರಣಬಸಪ್ಪ ಬಂಡಿಹಾಳ, ಮಂಜುನಾಥ ಗೊಂಡಬಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net