ದಾಸೋಹ ಶರಣ ಪರಂಪರೆಯ ಆಚರಣೆ

Dasoha Sharan heritage celebration
ರಬಕವಿ ದಾನಮ್ಮದೇವಿ ದೇವಸ್ಥಾನದಲ್ಲಿ ಕೊಟ್ರಶೆಟ್ಟಿ ಪರಿವಾರದವರು ಏರ್ಪಡಿಸಿದ ಅನ್ನದಾಸೋಹಕ್ಕೆ ಡಾ. ರವಿ ಜಮಖಂಡಿ ಚಾಲನೆ ನೀಡಿದರು. ಶೇಖರ ಕೊಟ್ರಶೆಟ್ಟಿ, ಶಿವಜಾತ ಉಮದಿ ಇದ್ದರು.
Published on

ರಬಕವಿ-ಬನಹಟ್ಟಿ: ಕಾಯಕ ಮತ್ತು ದಾಸೋಹಗಳು 12ನೇ ಶತಮಾನದ ನಿತ್ಯದ ಆಚರಣೆಯಾಗಿದ್ದವು. ಶರಣ ಸಂಸ್ಕೃತಿಯ ಡಿ.ಕೆ.ಕೊಟ್ರಶೆಟ್ಟಿ ಫೌಂಡೇಷನ್​ ಮೂಲಕ ಉದ್ಯಮಿ ಸೋಮಶೇಖರ ಕೊಟ್ರಶೆಟ್ಟಿ ಪ್ರತಿ ಅಮಾವಾಸ್ಯೆಯಂದು ದಾನಮ್ಮ ದೇವಸ್ಥಾನದಲ್ಲಿ ಭಕ್ತರಿಗೆ ದಾಸೋಹ ನಡೆಸುತ್ತಿರುವುದು ಬಹು ಶ್ರೇಷ್ಠವಾಗಿದೆ ಎಂದು ಅರವಳಿಕೆ ತಜ್ಞ ಡಾ.ರವಿ ಜಮಖಂಡಿ ಹೇಳಿದರು.

ದೇವಸ್ಥಾನದ ಅರ್ಚಕ ಮಹಾದೇವಯ್ಯ ನಂದೆಪ್ಪಗೋಳ ಮಾತನಾಡಿ, ಪ್ರತಿ ಅಮಾವಾಸ್ಯೆಯಂದು ದಾನಮ್ಮದೇವಿ ದರ್ಶನಕ್ಕೆ ಬರುವ ಭಕ್ತರಿಗೆ ಪ್ರಸಾದ ವಿತರಿಸುವ ಕೊಟ್ರಶೆಟ್ಟಿ ಪರಿವಾರಕ್ಕೆ ಸಾವಿರಾರು ಭಕ್ತರು ಅಭಿನಂದಿಸುತ್ತಿದ್ದಾರೆ. ಪ್ರಸಾದ ಸೇವೆ ಇರುವುದರಿಂದ ಭಕ್ತರು ಶ್ರದ್ಧಾಭಕ್ತಿಯಿಂದ ದೇವಿ ದರ್ಶನಕ್ಕೆ ಬಂದು ದರ್ಶನ ಪಡೆಯುವವರ ಸಂಖ್ಯೆ ಕೂಡ ಹೆಚ್ಚಾಗಿದೆ ಎಂದರು.

ದೇವಿ ಸೇವಕರಾದ ಆನಂದ ಜುಗಳಿ, ಸುನೀಲ ಹುಲಗಬಾಳಿ, ಸಂಜಯ ತೇಲಿ, ರವೀಂದ್ರ ಗಡಾದ, ಗಜಾನನ ವಜ್ರಮಟ್ಟಿ, ಇಂದ್ರಕುಮಾರ ಲಾಳಕೆ, ಚಂದ್ರಶೇಖರ ಹುಲಗಬಾಳಿ, ಶಂಕರ ಮಲ್ಲನ್ನವರ, ಬಸವರಾಜ ದಲಾಲ, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಶಿವಜಾತ ಉಮದಿ, ವಿಜಯಕುಮಾರ ಹಲಕುರ್ಕಿ, ಶೇಖರ ಕೊಟ್ರಶೆಟ್ಟಿ ಅನೇಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net