ದಾಸೋಹ- ಕಾಯಕ ನಿಷ್ಠೆಗಳನ್ನು ಅಳವಡಿಸಿಕೊಳ್ಳಿ

16 KMP 02
ಕಂಪ್ಲಿಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ 170ನೇ ಮಹಾಮನೆಯಲ್ಲಿ ಹಂಪಿ ಕನ್ನಡ ವಿವಿ ಸಂಶೋಧನಾ ವಿದ್ಯಾರ್ಥಿ ಬೇರ‌್ಗಿ ಜಯಶ್ರೀ ಉಪನ್ಯಾಸ ನೀಡಿದರು. ಪ್ರಮುಖರಾದ ಜಿ.ಪ್ರಕಾಶ್, ಇಂಗಳಗಿ ನಾರಾಯಣ, ಬಂಗಿ ಸರೋಜ ರ.ವ.ಹೆಗಡೆ ಇತರರಿದ್ದರು.
Published on

ಕಂಪ್ಲಿ: ಬಸವಣ್ಣ ಅವರ ವಚನದ ಸಪ್ತ ಸೂತ್ರಗಳೇ ಜೀವನ ಮೌಲ್ಯಗಳಾಗಿವೆ. ಇವುಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಹಂಪಿ ಕನ್ನಡ ವಿವಿಯ ಸಂಶೋಧನಾ ವಿದ್ಯಾರ್ಥಿ ಬೇರ‌್ಗಿ ಜಯಶ್ರೀ ಹೇಳಿದರು.

ಇಲ್ಲಿನ ಗಂಗಾ ಸಂಕೀರ್ಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಭಾನುವಾರ ಹಮ್ಮಿಕೊಂಡಿದ್ದ 170ನೇ ಮಹಾಮನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಚನಗಳಲ್ಲಿ ಜೀವನ ಮೌಲ್ಯಗಳು ಕುರಿತು ಉಪನ್ಯಾಸ ನೀಡಿ, ಅಂತರಂಗ ಬಹಿರಂಗ ಶುದ್ಧತೆಗೆ ಕಳ್ಳತನ, ಕೊಲೆ, ಅಸತ್ಯ, ಪರನಿಂದೆ, ಆತ್ಮರತಿಗಳಿಂದ ವಿಮುಖರಾಗಬೇಕು. ಸತ್ಯ, ಶಾಂತಿ, ದಯೆ, ಪರೋಪಕಾರ, ದಾಸೋಹ, ಕಾಯಕ ನಿಷ್ಠೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಮೌಲ್ಯಾಧಾರಿತ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.

ಬಲಿಜ ಸಮಾಜದ ಕಾರ್ಯದರ್ಶಿ ಇಂಗಳಗಿ ನಾರಾಯಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕಲ್ಲು ಮಣ್ಣುಗಳಲ್ಲಿ ದೇವರನ್ನು ಹುಡುಕುವ ಬದಲಿಗೆ, ಸೇವಾ ಮನೋಭಾವನೆಯುಳ್ಳ ಮನುಷ್ಯರಲ್ಲಿಯೇ ದೇವರನ್ನು ಕಾಣಬೇಕಿದೆ. ಅರ್ಥಪೂರ್ಣ ಬದುಕು ಸಾಗಿಸಲು ಸಾಹಿತ್ಯದ ಅಧ್ಯಯನ ಅಗತ್ಯ. ಕೃತಿಗಳನ್ನು ಕೊಂಡು ಓದುವ ಪ್ರವೃತ್ತಿ ಹೆಚ್ಚಬೇಕಿದೆ ಎಂದರು.

ತಾಲೂಕು ಶರಣ ಸಾಹಿತ್ಯ ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪದಾಧಿಕಾರಿಗಳಾದ ಎಸ್.ಡಿ.ಬಸವರಾಜ, ಎಸ್.ಶಾಮಸುಂದರರಾವ್, ಕೆ.ಚಂದ್ರಶೇಖರ, ಕವಿತಾಳ ಬಸವರಾಜ, ಎಸ್.ವೀರಭದ್ರಪ್ಪ, ಅಶೋಕ ಕುಕನೂರು, ಎಚ್.ನಾಗರಾಜ, ಬೇರ‌್ಗಿ ಬಸಮ್ಮ, ಮಹಾಂತೇಶ, ಬಡಿಗೇರ ಜಿಲಾನ್‌ಸಾಬ್, ಎಸ್.ರಾಮು, ಹಂಚಿನಾಳ ಪೀರಾಸಾಬ್, ಆದೀಶ ಜವಳಿ, ಶೇಖಣ್ಣ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net