

ಕುರುಗೋಡು: ನಾವು ದುಡಿದ ಮೂರು ಪಾಲು ನಮಗಿದ್ದರೆ ಒಂದು ಪಾಲು ದಾನ- ಧರ್ಮ ಮಾಡಿ ಎಂದು ಕುರುಗೋಡಿನ ಜಗದ್ಗುರು ಕೊಟ್ಟೂರು ವಿರಕ್ತ ಶಾಖಾ ಮಠದ ನಿರಂಜನ ಪ್ರಭು ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ದುಶ್ಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆ ಸದ್ಭಾವನಾ ಪಾದಯಾತ್ರೆ ನಂತರ ಧರ್ಮಸಭೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೀವದಲ್ಲಿ ಖುಷಿಯಿಂದ ಇರಬೇಕು. ಬಸವಣ್ಣ ತಿಳಿಸಿದಂತೆ ದಾಸೋಹ ಮತ್ತು ಕಾಯಕ ಅಳವಡಿಸಿಕೊಳ್ಳಬೇಕು.
ಸ್ವಾಮಿ ಎಂದರೆ ಸ್ಥಾವರಕ್ಕೆ ಒಡೆಯನಲ್ಲ ಸಮಾಜಕ್ಕೆ ಒಬ್ಬ ನಿಷ್ಠಾವಂತ ಸೇವಕ. ಮಠದಲ್ಲಿರುವ ಕಂಬಗಳಿಗೆ ಒಡೆಯನಾಗುವುದಲ್ಲ ಸಮಾಜದಲ್ಲಿರುವ ಬಿಂಬಗಳಿಗೆ ಸ್ವಾಮಿ ಎಂದು ಕರೆಯುತ್ತಾರೆ ಎಂದು ಹೇಳಿದರು.