ಮಳವಳ್ಳಿಯಲ್ಲಿ ದಾಸೋಹ ದಿನ

21 mlv 2.
ಮಳವಳ್ಳಿ ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಬಳಿ ವೀರಶೈವ ಲಿಂಗಾಯತ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಿದ್ಧಗಂಗಾ ಶ್ರೀಗಳ 6ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅನ್ನಸಂತರ್ಪಣೆ ಮಾಡಲಾಯಿತು.
Published on

ಮಳವಳ್ಳಿ: ಪಟ್ಟಣ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಮಂಗಳವಾರ ಲಿಂಗೈಕ್ಯ ಶ್ರೀ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಆರನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ದಾಸೋಹ ದಿನವನ್ನು ಆಚರಿಸಲಾಯಿತು.

ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಬಳಿ ವಿವಿಧ ವೀರಶೈವ ಲಿಂಗಾಯತ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅನ್ನ ದಾಸೋಹ ಮಾಡಲಾಯಿತು.

ಬಸವ ಕೇಂದ್ರ ತಾಲೂಕು ಅಧ್ಯಕ್ಷ ತೊಟ್ಟಿಮನೆ ಚನ್ನಪ್ಪ ಮಾತನಾಡಿ, ಶ್ರೀ ಶಿವಕುಮಾರ ಸ್ವಾಮೀಜಿ ಅವರು ತಮ್ಮ ಜೀವಿತಾವಧಿಯ ಕೊನೆಯ ಉಸಿರಿರುವವರೆಗೂ ದೀನರ ಒಳಿತಿಗಾತಿಗಾಗಿ ತ್ರಿವಿಧ ದಾಸೋಹವನ್ನು ಮಾಡುತ್ತಲೇ ಸಮಾಜದ ಜ್ಞಾನ ದಾಸೋಹದ ಸಂದೇಶವನ್ನು ಸಾರಿದ್ದಾರೆ. ಹೀಗಾಗಿ ಎಲ್ಲ ವರ್ಗದ ಜನರು ಶ್ರೀಗಳ ಸ್ಮರಣೆ ಮಾಡುತ್ತಾರೆ ಎಂದರು.

ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ವೃತ್ತಕ್ಕೆ ವಿಶ್ವಗುರು ಬಸವೇಶ್ವರ ಹೆಸರನ್ನು ನಾಮಕರಣ ಮಾಡಬೇಕೆಂದು ಹಲವು ವರ್ಷಗಳಿಂದ ಪುರಸಭೆ ಮತ್ತು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದು, ಇಂದಿಗೂ ಕಾರ್ಯಗತವಾಗಿಲ್ಲ. ಕೂಡಲೇ ನಾಮಫಲಕ ಹಾಕಿಸಿ ಅಧಿಕೃತ ಘೋಷಣೆ ಮಾಡಬೇಕೆಂದು ಮನವಿ ಮಾಡಿದರು.

ವೀರಶೈವ ಮಹಾಸಭ ತಾಲೂಕು ಅಧ್ಯಕ್ಷ ಮೂರ್ತಿ, ನಿರ್ದೇಶಕರಾದ ಕ್ಯಾತನಹಳ್ಳಿ ಅಶೋಕ್, ಆರ್.ಬಿ.ಹಳ್ಳಿ ಸುರೇಶ್ ಕುಮಾರ್, ತಾಂಡವಮೂರ್ತಿ, ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೃಷಬೇಂದ್ರಪ್ಪ, ಉಪಾಧ್ಯಕ್ಷ ಜಗದೀಶ, ಪುರಸಭೆ ಸದಸ್ಯ ಟಿ.ನಂದಕುಮಾರ್, ವೀರಶೈವ ನೌಕರರ ಸಂಘದ ಗೌರವಾಧ್ಯಕ್ಷ ಮಲ್ಲೇಶ್, ಸಿಪಿಐಎಂ ಸಂಘಟನೆ ಮುಖಂಡ ಭರತ್ ರಾಜ್, ನಿವೃತ್ತ ಯೋಧ ಸುರೇಶ್, ಮುಖಂಡರಾದ ಗಜೇಂದ್ರ, ನಟರಾಜು, ದಯಶಂಕರ್, ಸುಬ್ರಮಣಿ, ಚಂದ್ರಶೇಖರ್, ಜಗದೀಶ್, ಸತೀಶ್, ಸೋಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net