ದ.ಕ ಜಿಲ್ಲಾ ಮಟ್ಟದ ಸ್ವಾತಂತ್ರ್ಯೋತ್ಸವ; ಸಚಿವ ಅಂಗಾರರಿಂದ ಧ್ವಜಾರೋಹಣ

IMG-20210815-WA0006
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆ ಭಾನುವಾರ ನಗರದ ನೆಹರು ಮೈದಾನದಲ್ಲಿ ಜರುಗಿತು. ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವ ಎಸ್‌. ಅಂಗಾರ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು.
ಇದಕ್ಕೂ ಮೊದಲು ತೆರೆದ ಜೀಪ್‌ನಲ್ಲಿ ತೆರಳಿ, ಪೆರೇಡ್‌ ವಂದನೆ ಸ್ವೀಕರಿಸಿದರು. ತುಳುವಿನಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ಕಷ್ಟ-ನಷ್ಟ ಅನುಭವಿಸಿದ ಹಿರಿಯನ್ನು ನೆನಪಿಸಿದರು. ಇತಿಹಾಸವನ್ನು ಮರೆಯದೆ, ರಾಷ್ಟ್ರದ ಸ್ವತಂತ್ರ ಸಾರ್ವಭೌಮ ಜೀವನವನ್ನು ಇನ್ನಷ್ಟು ಶಕ್ತಿಶಾಲಿಯಾಗಿ ಕಟ್ಟುವ ಸುವರ್ಣ ಸಂದರ್ಭ ನಮಗೆ ಬಂದಿದೆ. ಅಮರ ಸುಳ್ಯ ಹೋರಾಟದ ಇತಿಹಾಸವನ್ನೂ ಮರೆಯದಿರೋಣ, ಇಂತಹ ಹೋರಾಟಗಳು ನಮಗೆ ಸ್ಪೂರ್ತಿದಾಯಕ ಎಂದರು.
ಕರೊನಾ ಮೂರನೇ ಅಲೆ ಎದುರಿಸಲು, ಸಿದ್ಧರಾಗುವಂತೆ ತಿಳಿಸಿದ ಅವರು, ದುಡುಕು, ಉದಾಸೀನ ಬಿಟ್ಟು, ಎಚ್ಚೆತ್ತುಕೊಂಡು ತಜ್ಞರು ತಿಳಿಸಿದಂತೆ ಸರ್ಕಾರ ನಿಗದಿಪಡಿಸಿದ ನಿಯಮದಂತೆ ನಡಯುವಂತೆ ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.
ಶಾಸಕ ವೇದವ್ಯಾಸ ಕಾಮತ್‌, ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಮೇಯರ್‌ ಪ್ರೇಮಾನಂದ ಶೆಟ್ಟಿ, ನಗರ ಪೊಲೀಸ್‌ ಆಯುಕ್ತ ಶಶಿಕುಮಾರ್‌, ಪಾಲಿಕೆ ಆಯುಕ್ತ ಅಕ್ಷಿ ಶ್ರೀಧರ್‌ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net