ಮೇ 9ರಂದು ರಾಜ್ಯಾದ್ಯಂತ ದಸ್ಕತ್ ಬಿಡುಗಡೆ

Published on

ಮೈಸೂರು: ಜೈ ಭಜರಂಗಿ ಫಿಲ್ಮ್ಸ್‌ಲಾಂಛನದಡಿ ಜಗದೀಶ್ ಎನ್.ಅರೇಬನ್ನಿ ಮಂಗಲ ನಿರ್ಮಿಸಿರುವ ದಸ್ಕತ್ (ಸಹಿ) ಕನ್ನಡ ಚಲನಚಿತ್ರ ಮೇ 9ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಅನೀಶ್ ಪೂಜಾರಿ ವೇಣೂರು ತಿಳಿಸಿದರು.

ತುಳು ಭಾಷೆಯ ದಸ್ಕತ್ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ತಾವೇ ಬರೆದಿದ್ದು, ಕರಾವಳಿ ನೆಲದ ಅಸ್ಮಿತೆ, ಸಂಸ್ಕೃತಿ, ಕರಾವಳಿಗರ ಬದುಕು, ಸಂಘರ್ಷದ ಕಥಾನಕವೇ ಚಿತ್ರದ ಮೂಲ ಜೀವಾಳವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬೆಳ್ತಂಗಡಿ ತಾಲೂಕಿನ ವೇಣೂರು, ನಾರಾವಿ, ಅಂಡಿಂಜೆ, ಕೊಕ್ರಾಡಿ ಮುಂತಾದ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ದಸ್ಕತ್ ತುಳು ಚಿತ್ರ ಕರಾವಳಿಭಾಗದಲ್ಲಿ ಅಭೂತಪೂರ್ವ ಯಶ ಕಂಡಿದ್ದು, ವೀಕ್ಷಕರ ಮನ ಗೆದ್ದಿದೆ. ಇದೀಗಕನ್ನಡಕ್ಕೆ ಡಬ್ಬಿಂಗ್ ಮಾಡಲಾಗಿದೆ ಎಂದರು.

ಪ್ರಾಕೃತಿಕ ಸೌಂದರ್ಯ, ನೈಜ ಅಭಿನಯದಿಂದ ಕೂಡಿರುವ ಚಿತ್ರದಲ್ಲಿ ಮೂರು ಹಾಡುಗಳು, ಎರಡು ಸಾಹಸ ದೃಶ್ಯಗಳಿದ್ದು, ಒಂದು ಗಂಟೆ 57 ನಿಮಿಷಗಳ ಕಾಲ ಮನೋರಂಜನೆಯನ್ನು ದಸ್ಕತ್ ಚಿತ್ರ ವೀಕ್ಷಕರಿಗೆ ಒದಗಿಸುವುದರಲ್ಲಿ ಯಾವ ಅನುಮಾನವೇ ಇಲ್ಲ ಎಂದು ಹೇಳಿದರು.

ಚಿತ್ರದ ನಾಯಕ ದೀಕ್ಷಿತ್ ಕೆ.ಅಂಡಿಂಜೆ, ನಾಯಕಿ ಭವ್ಯ ಪೂಜಾರಿ, ವಿನೋದ್ ಕರ್ಕೇರ, ಮನೋಹರ್, ರಾಹುಲ್‌ರಾವ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net