

ಕೆರೂರ: ಬಸವಾದಿ ಶರಣರಿಗಿಂತ ಮೊದಲು ವಚನ ಸಾಹಿತ್ಯಕ್ಕೆ ರೂಪ ಕೊಟ್ಟವರು ದೇವರ ದಾಸಿಮಯ್ಯ ಎಂದು ರುದ್ರಮುನಿ ಶ್ರೀಗಳು ಹೇಳಿದರು.
ಪಟ್ಟಣ ಪಂಚಾಯಿತಿ ಕಾರ್ಯಲಯದಲ್ಲಿ ಬುಧವಾರ ಆಯೋಜಿಸಿದ್ದ ದೇವರ ದಾಸಿಮಯ್ಯನವರ 1046ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ದೇವಾಂಗ ಸಮಾಜದ ಹುಟ್ಟಿಗೆ ಮೂಲ ಕಾರಣ ದಾಸಿಮಯ್ಯ. ದೇವಾನು ದೇವತೆಗಳ ಮಾನ ರಕ್ಷಣೆಗೆ ವಸ್ತ್ರ ತಯಾರಿಸಿ, ತಮ್ಮ ಕಾಯಕದೊಂದಿಗೆ ವಚನಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡಿದರು ಎಂದರು. ಸಮಾಜದ ಮುಖಂಡ ಗೋಪಾಲಪ್ಪ ಮದಿ ಮಾತನಾಡಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಮದಿ, ಉಪಾಧ್ಯಕ್ಷ ಮೋದಿನಸಾಬ ಚಿಕ್ಕೂರ, ಸದಸ್ಯ ವಿಠ್ಠಲಗೌಡ ಗೌಡರ, ಸಮಾಜದ ಮುಂಡರಾದ ಪೀತಾಂಬ್ರಪ್ಪ ಹವೇಲಿ, ಸದಾನಂದ ಮದಿ, ಮಹೇಶ ಮುಗಳಿ, ವೀರುಪಾಕ್ಷಪ್ಪ ಮುಂಡಾಸದ, ಗೋಪಾಲ ದಾಸಮನಿ, ದುರ್ವಾಸ ಮಾನ್ವಿ, ಮುಖ್ಯಾಧಿಕಾರಿ ರಮೇಶ ಮಾಡಬಾಳ ಇದ್ದರು.