

ರಾಯಚೂರು: ದೇವರ ದಾಸಿಮಯ್ಯ ತಮ್ಮ ಕಾಯಕದ ಜತೆಗೆ ವಚನಗಳ ಮೂಲಕ ಸಮ ಸಮಾಜ ನಿರ್ಮಾಣ ಮಾಡುವಲ್ಲಿ ಅತ್ಯಂತ ಮುಂಚೂಣಿಯಲ್ಲಿರುವ ವಚನಕಾರರಾಗಿದ್ದಾರೆ ಎಂದು ತಹಸೀಲ್ದಾರ್ ಸುರೇಶ ವರ್ಮಾ ಹೇಳಿದರು.
ಸ್ಥಳೀಯ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಶನಿವಾರ ಏರ್ಪಡಿಸಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ದೇವರ ದಾಸಿಮಯ್ಯ ತಮ್ಮ ವಚನಗಳ ಮೂಲಕ ಲೋಕದ ಅಂಕುಡೊಂಕು ತಿದ್ದುವ ಕೆಲಸ ಮಾಡಿದ್ದಾರೆ ಎಂದರು.
ದಾಸಿಮಯ್ಯ ಸೇರಿದಂತೆ ವಚನಕಾರರು ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿಯೊಬ್ಬರು ನಡೆದಾಗ ಮಾತ್ರ ಜಯಂತಿ ಆಚರಣೆ ಸಾರ್ಥಕವಾಗುತ್ತಿದ್ದು, ಜತಗೆಗೆ ವಚನಕಾರರ ಆಶಯವೂ ಈಡೇರಲಿದೆ ಎಂದು ಸುರೇಶ ವರ್ಮಾ ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಬ್ಬಂದಿ ಇಸ್ಮಾಯಿಲ್, ಮುಖಂಡರಾದ ದಂಡಪ್ಪ ಬಿರಾದರ, ಜಿ.ನಾಗರಾಜ, ಮಲ್ಲಿಕಾರ್ಜುನ, ಈರಣ್ಣ ಕರ್ಲಿ, ಉದಯಕುಮಾರ, ಪುಷ್ಪ, ಗೂಳಿಗೌಡ, ಬಸವರಾಜ, ಸೂರ್ಯನಾರಾಯಣ, ಮಲ್ಲಿಕಾರ್ಜುನ ಕಂಪ್ಲಿ ಉಪಸ್ಥಿತರಿದ್ದರು.