

ಕಳಸ: ಜನರ ನಿಜವಾದ ಜೀವನ ಶೈಲಿಯನ್ನು ಜಾನಪದ ರೂಪದಲ್ಲಿ ಜನರಿಗೆ ತೋರ್ಪಡಿಸುವುದೇ ಜಾನಪದ ಶೈಲಿ ಎಂದು ಮಲವಂತಿಗೆ ಗ್ರಾಪಂ ಅಧ್ಯಕ್ಷ ಪ್ರಕಾಶ್ ಜೈನ್ ಹೇಳಿದರು.
ಎಳನೀರು ಗ್ರಾಮದ ಬುಡಕಟ್ಟು ಜನಾಂಗ ವಾಸಿಸುವ ಪ್ರದೇಶದ ಬ್ರಹ್ಮ ದೇವರ ಸನ್ನಿಧಿಯಲ್ಲಿ ಕಳಸ ತಾಲೂಕು ಕನ್ನಡ ಜಾನಪದ ಪರಿಷತ್ ಕಜಾಪ ದಶಮನೋತ್ಸವ ಮತ್ತು ಮಹಿಳಾ ದಿನಾಚರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮದ ಕಟ್ಟ ಕಡೆಯ ಹಳ್ಳಿಗಳಲ್ಲಿ ಜಾನಪದ ಕಾರ್ಯಕ್ರಮವನ್ನು ಮಾಡುವ ಮುಖಾಂತರ ಜಾನಪದಕ್ಕೆ ನಿಜವಾದ ಅರ್ಥ ತಂದುಕೊಟ್ಟಿದ್ದಾರೆ. ಇಲ್ಲಿ ಬುಡಕಟ್ಟು ಜನಾಂಗದವರನ್ನು ಒಟ್ಟುಗೂಡಿಸಿ ಅವರೊಂದಿಗೆ ಕಾರ್ಯಕ್ರಮ ಮಾಡುವುದರಿಂದ ಅವರ ಜಾನಪದ ಸೊಗಡನ್ನು ಬಿಂಬಿಸಲು ಉತ್ತಮ ಅವಕಾಶ ನೀಡಿದಂತಾಗಿದೆ ಎಂದರು.
ಇದೇ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಪ್ರೇಮ್ ಕುಮಾರ್ ಇಂದು ಸಾಹಿತಿಯಾಗಿ ಅನೇಕ ಪುಸ್ತಕಗಳನ್ನು ಬರೆದಿರುವುದು ನಮ್ಮ ಊರಿಗೆ ಹೆಮ್ಮೆ ತಂದಿದೆ. ಇಂತಹ ಹಳ್ಳಿ ಪ್ರದೇಶದಲ್ಲಿ ಬುಟ್ಟಿ ಹೆಣೆಯುವುದು, ನಾಟಿ ಔಷಧ ನೀಡುವುದು ಮುಂತಾದ ಜಾನಪದ ಸೊಗಡನ್ನು ಉಳಿಸಿಕೊಂಡು ಬಂದಿರುವ ಅನೇಕ ಪ್ರತಿಭಾವಂತಿದ್ದಾರೆ. ಅವರನ್ನು ಪಟ್ಟಣಕ್ಕೆ ಪರಿಚಯಿಸುವ ಮತ್ತು ಪ್ರೋತ್ಸಾಹಿಸುವ ಕೆಲಸವನ್ನು ಕನ್ನಡ ಜಾನಪದ ಪರಿಷತ್ ಮಾಡುತ್ತಿದೆ ಎಂದು ಹೇಳಿದರು.
ತಾಲೂಕು ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಸುಜಯ ಸದಾನಂದ, ವಿನಾಯಕ, ಭರತರಾಜ್, ಅಂಕಿತಾ ಅರೋಷ್, ಮುರುಳಿದರ ಭಟ್, ಕಲ್ಪನಾ ಅಜಿತ್, ಶರೀಫ್, ವಿಜಯ್, ಶಶಿಕಲಾ, ಪ್ರಸಿದ್ದ ಜೈನ್, ಅಮಿತಾ ವಿನಾಯಕ, ಮಂಜುಳಾ, ಉಷಾ, ಶಾಲಿನಿ ವಿಜಯ್, ದಿವ್ಯಾ, ಪ್ರತಿಮಾ, ಪ್ರಭಾಮಣಿ, ಶಾಂತಮ್ಮ, ಸವಿತಾ ಇದ್ದರು.