ದಾಸವಾಣಿ

New Shreyashri Ballari New
Published on

ಹುಬ್ಬಳ್ಳಿ : ಇಲ್ಲಿನ ಸಂತೋಷ ನಗರದ ಶಕ್ತಿ ಕಾಲನಿಯ ಶ್ರೀ ರಾಘವೇಂದ್ರ ಸ್ವಾಮೀಜಿಗಳ ಮಠದಲ್ಲಿ ಆ. 29ರಂದು ಸಂಜೆ 6 ರಿಂದ ರಾತ್ರಿ 7.30ರವರೆಗೆ ಶ್ರೇಯಶ್ರೀ ಬಳ್ಳಾರಿ ಅವರಿಂದ ದಾಸವಾಣಿ ಮತ್ತು ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

ತಬಲಾ ಸಾಥಿದಾರರಾಗಿ ಮನುಕುಮಾರ ಹಿರೇಮಠ, ರಾಘವೇಂದ್ರ ನಾಕೋಡ ಮತ್ತು ಹಾಮೋನಿಯಂ ಸಾಥಿದಾರರಾಗಿ ವಿಜಯಕುಮಾರ ಅರ್ಕಸಾಲಿ ಭಾಗವಹಿಸುವರು ಎಂದು ಶ್ರೀ ಮಠದ ಅಧ್ಯಕ್ಷ ಗೋವಿಂದಾಚಾರ್ಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net