

ಹುಬ್ಬಳ್ಳಿ : ಇಲ್ಲಿನ ಸಂತೋಷ ನಗರದಲ್ಲಿರುವ ಶಕ್ತಿ ಕಾಲನಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಗುರುಸಾರ್ವಭೌಮರ 353 ನೇ ಆರಾಧನ ಮಹೋತ್ಸವದ ಮಧ್ಯಾರಾಧನೆ ಅಂಗವಾಗಿ ಆ. 21 ರಂದು ರಾತ್ರಿ 7 ಗಂಟೆಯಿಂದ 8.30 ರವರೆಗೆ ಗಾಯಕಿ ಅರ್ಚನಾ ಕುಲಕರ್ಣಿ ಅವರು ದಾಸವಾಣಿ ಪ್ರಸ್ತುತಪಡಿಸುವರು.
ತಬಲಾ ಸಾಥಿದಾರರಾಗಿ ರಾಘವೇಂದ್ರ ನಾಕೋಡ, ಮನುಕುಮಾರ ಹಿರೇಮಠ, ಸಂವಾದಿನಿಗಾಗಿ ವಿಜಯಕುಮಾರ ಅರ್ಕಸಾಲಿ ಮತ್ತು ತಾಳ ವಾಧ್ಯಕ್ಕಾಗಿ ಮನೋಹರ ಜೋಶಿ ಆಗಮಿಸಲಿದ್ದಾರೆ ಎಂದು ಮಠದ ಧರ್ಮದರ್ಶಿ ಗೋವಿಂದ ಆಚಾರ್ಯ ತಿಳಿಸಿದ್ದಾರೆ.