

ಹುಬ್ಬಳ್ಳಿ: ಇಲ್ಲಿನ ಸಂತೋಷ ನಗರದ ಶಕ್ತಿ ಕಾಲನಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಫೆ. 20ರಂದು ಸಂಜೆ 6 ಗಂಟೆಯಿಂದ ರಾತ್ರಿ 7.30ರವರೆಗೆ ದಾಸವಾಣಿ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಶ್ವಿನಿ ಬುದ್ನಿ ಅವರು ಕಾರ್ಯಕ್ರಮ ನಡೆಸಿಕೊಡುವರು. ತಬಲಾ ಸಾಥಿದಾರರಾಗಿ ಮನುಕುಮಾರ ಹಿರೇಮಠ, ಹಾಮೋನಿಯಂ ಸಾಥಿದಾರರಾಗಿ ಮಂಜು ಗೋಕುಲ ಮತ್ತು ತಾಳ ವಾದ್ಯದಲ್ಲಿ ಮನೋಹರ್ ಜೋಶಿ ಸಾಥ್ ನೀಡುವರು ಎಂದು ಶ್ರೀ ಮಠದ ಅಧ್ಯಕ್ಷ ಗೋವಿಂದಾಚಾರ್ಯರು ತಿಳಿಸಿದ್ದಾರೆ.