

ಹುಬ್ಬಳ್ಳಿ : ಇಲ್ಲಿನ ಸಂತೋಷ ನಗರ ಶಕ್ತಿ ಕಾಲನಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜೂ. 5ರಂದು ಸಂಜೆ 6 ರಿಂದ ರಾತ್ರಿ 7.30 ರವರೆಗೆ ಸಮನ್ವಿತ ಹಿರೇಮಠ ಅವರಿಂದ ದಾಸವಾಣಿ ಹಾಗೂ ಪಿಟೀಲು ವಾದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಂಜು ಗೋಕುಲ ಅವರು ಹಾಮೋನಿಯಂ, ಮನುಕುಮಾರ ಹಿರೇಮಠ ಅವರು ತಬಲಾ, ಮನೋಹರ ಜೋಶಿ ಮತ್ತು ಮೌನೇಶ ಬಡಿಗೇರ ಅವರು ತಾಳ ವಾದ್ಯದಲ್ಲಿ ಸಾಥ ನೀಡುವರು ಎಂದು ಶ್ರೀಮಠದ ಅಧ್ಯಕ್ಷ ಗೋವಿಂದಾಚಾರ್ಯ ತಿಳಿಸಿದ್ದಾರೆ.