ದಾಸವಾಣಿ 26ರಂದು

New Annapurna Ingalagi new
Published on

ಹುಬ್ಬಳ್ಳಿ : ಇಲ್ಲಿನ ಸಂತೋಷ ನಗರದ ಶಕ್ತಿ ಕಾಲನಿಯ ಶ್ರೀ ರಾಘವೇಂದ್ರ ಸ್ವಾಮೀಜಿ ಮಠದಲ್ಲಿ ಜೂ. 26ರಂದು ಸಂಜೆ 6 ರಿಂದ ರಾತ್ರಿ 7.30ರವರೆಗೆ ದಾಸವಾಣಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಅನ್ನಪೂರ್ಣ ಇಂಗಳಗಿ ದಾಸವಾಣಿ ನಡೆಸಿಕೊಡಲಿದ್ದು, ಹಾಮೋನಿಯಂ ಸಾಥಿಯಾಗಿ ಶಿವಸ್ವಾಮಿ ಹಿರೇಮಠ, ತಬಲಾ ಸಾಥಿದಾರರಾಗಿ ಮನುಕುಮಾರ ಹಿರೇಮಠ ಹಾಗೂ ತಾಳ ವಾದ್ಯದಲ್ಲಿ ಮನೋಹರ ಜೋಶಿ ಮತ್ತು ಮೌನೇಶ ಬಡಿಗೇರ ಭಾಗವಹಿಸುವರು ಎಂದು ಶ್ರೀಮಠದ ಅಧ್ಯಕ್ಷ ಗೋವಿಂದಾಚಾರ್ಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net