

ಕಲಾದಗಿ: ಸಮೀಪದ ತುಳಸಿಗೇರಿ ಮಾರುತೇಶ್ವರ ದೇವಸ್ಥಾನದಲ್ಲಿ ನಾಲ್ಕನೇ ಕಾರ್ತಿಕ ಶನಿವಾರ ನಿಮಿತ್ತ ಬಾಗಲಕೋಟೆಯ ಖ್ಯಾತ ಗಾಯಕ ಸಂತೋಷ ಗದ್ದನಕೇರಿ ನಡೆಸಿಕೊಟ್ಟ 'ಕಾರ್ತಿಕ ಸಂಗೀತ ಸೇವೆ ದಾಸವಾಣಿ' ಕೇಳುಗರ ಮನಸೆಳೆಯುವಲ್ಲಿ ಯಶಸ್ವಿಯಾಯಿತು.
'ಗಜವದನಾ ಎನ್ನಾ ಪಾಲಿಸೋ' ಎಂಬ ಹಾಡಿನೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪವಮಾನ ಜಗದಪ್ರಾಣ, ತೊರೆದು ಜೀವಿಸಬಹುದೆ, ಭಾಗ್ಯದ ಲಕ್ಷ್ಮೀ ಬಾರಮ್ಮ, ಸತ್ಯವಂತರ ಸಂಘವಿರಲು ಮತ್ತಿತರ ದಾಸರ ಪದಗಳನ್ನು ಇಂಪಾಗಿ ಹಾಡಿದರು.
ರಾಘವೇಂದ್ರ ಗುರುನಾಯಕ ಹಾಗೂ ಪ್ರಕಾಶ ರುದ್ರಸ್ವಾಮಿಮಠ ತಬಲಾ, ಕೃಷ್ಣಾ ವಾರದ ತಾಳದ ಸಾಥ್ ನೀಡಿದರು.