

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಪರಿಮಳ ಮಾರ್ಗದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರದಂದು ಜರುಗುವ ಸಂಗೀತ ಸೇವೆಯಲ್ಲಿ ಸೆ. 14ರಂದು ಸಂಜೆ 6ಕ್ಕೆ ಎಚ್. ಈಶ್ವರಪ್ಪ ಅವರಿಂದ ದಾಸವಾಣಿ ಜರುಗಲಿದೆ.
ಅವರಿಗೆ ಕಿರಣ್ ಆಯಾಚೀತ ಹಾರ್ಮೋನಿಯಂ ಮತ್ತು ಸಂಜೀವ ಕಿತ್ತೂರು ಅವರು ತಬಲಾ ಸಾಥ್ ನೀಡಲಿದ್ದಾರೆ ಎಂದು ದೇವಸ್ಥಾನದ ಮುಖ್ಯ ಅರ್ಚಕ ಮುಕುಂದ ಆಚಾರ ಹಯಗ್ರೀವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.