ಯಶಸ್ವಿಯಾಗಿ ಮುಕ್ತಾಯಗೊಂಡ ದಸರಾ ಕುಸ್ತಿ ಸ್ಪರ್ಧೆ

Dasara wrestling competition concludes successfully
ಹಳಿಯಾಳದ ಜಿಲ್ಲಾ ಕುಸ್ತಿ ಅಖಾಡದಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತ ಕುಸ್ತಿಪಟುಗಳು ಹಾಗೂ ಕುಸ್ತಿ ತರಬೇತಿದಾರರು.
Published on

ಹಳಿಯಾಳ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಜಿಲ್ಲಾ ಕುಸ್ತಿ ಅಖಾಡದಲ್ಲಿ ಆಯೋಜಿಸಿಲಾಗಿದ್ದ 2025- 26ನೇ ಸಾಲಿನ ಜಿಲ್ಲಾಮಟ್ಟದ ದಸರಾ ಕುಸ್ತಿ ಸ್ಪರ್ಧೆಗಳು ಯಶಸ್ವಿಯಾಗಿ ಮುಕ್ತಾಯವಾಗಿವೆ.

ಸೋಮವಾರ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ಪುರುಷರ 57 ಕೆಜಿ ವಿಭಾಗದಲ್ಲಿ ಸತೀಶ ಮಿರಾಶಿ ಪ್ರಥಮ, ರಾಕೇಶ ಹರಿಜನ ದ್ವೀತಿಯ, 61 ಕೆಜಿ ವಿಭಾಗದಲ್ಲಿ ವಿಜಯ ದಡ್ಡೇರ ಪ್ರಥಮ, ಪಿಶೇಲಿಂಗ ಬಾಂದುರ್ಗಿ ದ್ವೀತಿಯ, 65 ಕೆಜಿ ವಿಭಾಗದಲ್ಲಿ ರೊಹಣ ದೊಡ್ಡಮನಿ ಪ್ರಥಮ, ಬಕಾರ ಅಹ್ಮದ ದ್ವೀತಿಯ, 70 ಕೆಜಿ ವಿಭಾಗದಲ್ಲಿ ಅಮೃತ ದುರ್ಗಾನವರ ಪ್ರಥಮ, ಪ್ರಹ್ಲಾದ ಪಾಟೀಲ ದ್ವೀತಿಯ, 97 ಕೆಜಿ ವಿಭಾಗದಲ್ಲಿ ಗಂಗಾಧರ ರಾಟೋಡ ಪ್ರಥಮ ಸ್ಥಾನ ಪಡೆದಿದ್ದಾರೆ.

ಮಹಿಳೆಯರ 50 ಕೆಜಿ ವಿಭಾಗದಲ್ಲಿ ರಾಧಿಕಾ ಬಸ್ತವಾಡಕರ ಪ್ರಥಮ, ಸೋನಲ ಲಾಂಬೋರೆ ದ್ವೀತಿಯ, 53 ಕೆಜಿ ವಿಭಾಗದಲ್ಲಿ ಕಾವೇರಿ ತಳಗೇರಿ ಪ್ರಥಮ, ಗಂಗೋತ್ರಿ ಹುಲಕೊಪ್ಪಕರ ದ್ವೀತಿಯ, 55 ಕೆಜಿ ವಿಭಾಗದಲ್ಲಿ ಕಾವ್ಯಾ ದಾನ್ವೇನವರ ಪ್ರಥಮ, ನೀಶಾ ಉಗ್ರಾಣಿ ದ್ವೀತಿಯ, 57 ಕೆಜಿ ವಿಭಾಗದಲ್ಲಿ ಶಾಲಿನಾ ಸಿದ್ಧಿ ಪ್ರಥಮ, ಪ್ರಭಾ ಶಿವನಗೇಕರ ದ್ವೀತಿಯ, 59 ಕೆಜಿ ವಿಭಾಗದಲ್ಲಿ ಭಗವತಿ ಗೋಂದಳಿ ಪ್ರಥಮ, ಸವಿತಾ ಸಿದ್ಧಿ ದ್ವೀತಿಯ, 62 ಕೆಜಿ ವಿಭಾಗದಲ್ಲಿ ಭುವನೇಶ್ವರಿ ಕೋಳಿವಾಡ ಪ್ರಥಮ, ವಿದ್ಯಾಶ್ರೀ ಗೆನ್ನನವರ ದ್ವೀತಿಯ, 65 ಕೆಜಿ ವಿಭಾಗದಲ್ಲಿ ಪ್ರಿನ್ಸೀಟಾ ಸಿದ್ಧಿ ಪ್ರಥಮ, ವರ್ಷಾ ಯಮನಕ್ಕನವರ ದ್ವೀತಿಯ, 68 ಕೆಜಿ ವಿಭಾಗದಲ್ಲಿ ಸುಜಾತಾ ಪಾಟೀಲ ಪ್ರಥಮ, ವೆಲೇನ್ಸಿಯಾ ಫರ್ನಾಡೀಸ್ ದ್ವೀತಿಯ, 72 ಕೆಜಿ ವಿಭಾಗದಲ್ಲಿ ಪ್ರತೀಕ್ಷಾ ಭೋವಿ ಪ್ರಥಮ, ಪೃಥ್ವಿ ಮಿರಜಕರ ದ್ವೀತಿಯ, 76ಕೆಜಿ ವಿಭಾಗದಲ್ಲಿ ಮನಿಷಾ ಸಿದ್ಧಿ ಪ್ರಥಮ, ಓಕ್ಸಿಲೀಯಾ ಹರನೋಡಕರ ದ್ವೀತಿಯ ಸ್ಥಾನ ಪಡೆದಿದ್ದಾರೆ.

ಗ್ರೀಕ್ ರೋಮನ್ 55 ಕೆಜಿ ವಿಭಾಗಲ್ಲಿ ಅಬುಬಕರ ಸಲೀಂ ನದಾಫ ಪ್ರಥಮ, ಯಶವಂತ ಸಣ್ಣಕ್ಕಿ ದ್ವೀತಿಯ, 60 ಕೆಜಿ ವಿಭಾಗದಲ್ಲಿ ಮಹಮ್ಮದ ಜುನೇದ ನದಾಫ್ ಪ್ರಥಮ, ವಿಠ್ಠಲ ಕೊಳ್ಳನವರ ದ್ವೀತಿಯ, 63 ಕೆಜಿ ವಿಭಾಗದಲ್ಲಿ ಬಾಳು ಧಾಮಣೇಕರ ಪ್ರಥಮ, ರಾಮನಿಂಗ ಮ. ಕುಂದೇಕರ ದ್ವೀತಿಯ, 67 ಕೆಜಿ ವಿಭಾಗದಲ್ಲಿ, ಸೂರಜ ಗಂದಿಟಕರ ಪ್ರಥಮ, ಮಹಮ್ಮದ ಉದಯ್ಯರ ಭಟ್ಕಳ ದ್ವೀತಿಯ, 72 ಕೆಜಿ ವಿಭಾಗದಲ್ಲಿ ಜ್ಞಾನೇಶ್ವರ ಹಳದೂಳಕರ ಪ್ರಥಮ 82 ಕೆಜಿ ವಿಭಾಗದಲ್ಲಿ ರಾಮಣ್ಣಾ ಕಲಘಟಕರ ಪ್ರಥಮ, 97 ಕೆಜಿ ವಿಭಾಗದಲ್ಲಿ ವಿಜಯ ಬಂಗ್ಯನವರ ಪ್ರಥಮ, 130 ಕೆಜಿ ವಿಭಾಗದಲ್ಲಿ ಸೋಮಶೇಖರ ಗೌಡಾ ಪ್ರಥಮ ಸ್ಥಾನ ಗಳಿಸಿದ್ದಾರೆ.

ವಿಜೇತ ಕ್ರೀಡಾಪಟುಗಳು ವಿಭಾಗ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ ಎಂದು ತರಬೇತುದಾರ ತುಕಾರಾಮ ಗೌಡ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net