ಮೋಹ ಬಿಟ್ಟು ದೇವರ ಪ್ರಾರ್ಥಿಸಿ

20 bk 11
Published on

ಬಸವಕಲ್ಯಾಣ: ಸ್ವಾರ್ಥಕ್ಕಾಗಿ ದುಡಿಯುತ್ತಿರುವ ಮನುಷ್ಯನಿಗೆ ಸುಖಃ, ಶಾಂತಿ, ನೆಮ್ಮದಿ ದೊರೆಯುತ್ತಿಲ್ಲ. ಚಂಚಲ ಚಿತ್ತನಾಗಿ ಬದುಕುತ್ತಿದ್ದಾನೆ. ಅದನ್ನು ದೂರ ಮಾಡಲು ಮೋಹ ಬಿಟ್ಟು ದೇವರ ಪ್ರಾರ್ಥನೆ ಮಾಡಬೇಕು ಎಂದು ಶ್ರೀ ಸಿದ್ದೇಶ್ವರ ಶಿವಾಚಾರ್ಯರು ಹೇಳಿದರು.

ಹಿರೇನಾಗಾಂವದ ಶ್ರೀ ಭವಾನಿ ಮಂದಿರದಲ್ಲಿ ದಸರಾ ನವರಾತ್ರಿ ನಿಮಿತ್ತ ಶ್ರೀ ಜಯಶಾಂತಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡ ದೇವಿ ಮಹಾಪುರಾಣ, ಪ್ರವಚನದಲ್ಲಿ ಬುಧವಾರ ಮಾತನಾಡಿದ ಅವರು, ನವರಾತ್ರಿ ವೇಳೆ ದೇವಿ ಪುರಾಣ ಮತ್ತು ಸಮಾಜೋದ್ಧಾರಕ ಕಾರ್ಯಕ್ರಮ ಏರ್ಪಡಿಸುತ್ತಿದ್ದಾರೆ. ಸುಂದರ ಸಮಾಜದ ಕನಸು ಹೊತ್ತು ಮಹತ್ವದ ಕೆಲಸ ಮಾಡುತ್ತಿದ್ದಾರೆ ಎಂದರು.

ಖೇರ್ಡಾ (ಬಿ) ಶ್ರೀ ಅಭಿನಶಿವಲಿಂಗ ಸ್ವಾಮೀಜಿ, ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಭರಮಶೆಟ್ಟಿ ತಟಕಲ್, ಕಾರ್ತಿಕಯ್ಯ ಸ್ವಾಮಿ ರಾಜೋಳಾ ಸಂಗೀತಕ್ಕೆ ವಿಶ್ವನಾಥ ಸ್ವಾಮಿ ಐನೊಳ್ಳಿ ತಬಲಾ ಸಾಥ್ ನೀಡಿದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಕವೆಸೂರ, ಕಾರ್ಯದರ್ಶಿ ಸುರೇಶ ಮಾಳಿ, ಖಜಾಂಚಿ ಕಲ್ಯಾಣಿ ಗಿರಿಮನಿ, ಸಂಚಾಲಕ ನಾಗಣ್ಣ ಕಮಾಟೆ, ಮುಖಂಡರಾದ ಸಿದ್ದಣ್ಣ ಬಾಬನೋರ, ನಾಗಶೆಟ್ಟಿ ಪಟ್ಟೆದಾರ್, ನಾಗಣ್ಣ ಬಿರಾದಾರ, ಚನ್ನಪ್ಪ ಅಳ್ಳಿ, ಜಗನ್ನಾಥ ಗದ್ಲೆಗಾಂವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net