

ಗದಗ: ಮನುಷ್ಯ ದೈಹಿಕ, ಮಾನಸಿಕವಾಗಿ ಸದೃಢರಾಗಲು ಕ್ರೀಡೆ ಸಹಕಾರಿ ಯಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ.ಸಂಕನೂರ ಅಭಿಪ್ರಾಯ ಪಟ್ಟರು.
ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣ ದಲ್ಲಿ ಇಂದು ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ,ಗದಗ ಸಂಯುಕ್ತ ಆಶ್ರಯದಲ್ಲಿ ನಡೆದ 2023-24ನೇ ಸಾಲಿನ ಗದಗ ತಾಲ್ಲೂಕ ದಸರಾ ಕ್ರೀಡಾಕೂಟ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ರೀಡಾಪಟುಗಳು ಹೆಚ್ಚು, ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸಬೇಕೆಂದರು. ಏಷಿಯನ್ ಗೇಮ್ಸ್ ನಲ್ಲಿ ಕ್ರೀಡಾ ಪಟುಗಳ ಸಾಧನೆ ನಮಗೆ ತೃಪ್ತಿ ತಂದಿದೆ. ಆದರೆ ಓಲಂಪಿಕ್ ಗೇಮ್ಸ್ ನಲ್ಲಿ 48ನೇ ಸ್ಥಾನ ಪಡೆದಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಓಲಂಪಿಕ್ ಪಂದ್ಯದಲ್ಲಿ 10ನೇ ಸ್ಥಾನ ಪಡೆಯಬೇಕೆಂಬ ಉದ್ದೇಶ ದಿಂದ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ 2020ರಲ್ಲಿ ಖೇಲೋ ಇಂಡಿಯಾ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಗ್ರಾಮೀಣ ಪ್ರದೇಶದ ಪ್ರತಿಭಾವಂತ ಕ್ರೀಡಾ ಪಟುಗಳಿಗೆ ಸೂಕ್ತ ತರಬೇತಿಯನ್ನು ನೀಡಲಾಗುತ್ತದೆ. ಖೇಲೋ ಇಂಡಿಯಾ ಟೀಮ್ ನಲ್ಲಿ ಆಯ್ಕೆ ಯಾದ ಕ್ರೀಡಾ ಪಟುಗಳಿಗೆ ಪ್ರತಿ ವರ್ಷ 1.20 ಲಕ್ಷ ರೂಪಾಯಿ ನೀಡಲಾಗುತ್ತದೆ. ಕ್ರೀಡಾಪಟುಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಕ್ರೀಡಾ ಪಟುಗಳು ಕ್ರೀಡಾ ಮನೋಭಾವ ಬೆಳಸಿಕೊಳ್ಳಬೇಕೆಂದರು. ಕ್ರೀಡೆ ಮಾತ್ರವಲ್ಲ ಪರೀಕ್ಷೆ ಯಲ್ಲಿ ಕೂಡಾ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಎಂದರು.
ತಾ.ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಸ್.ಜಿನಗಾ, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ರವಿಕಾಂತ ಅಂಗಡಿ, ಡಿ.ಡಿ.ಪಿ.ಐ. ಎಂ.ಎ.ರಡ್ಡೇರ, ಗದಗ ಶಹರ ಬಿ.ಇ.ಓ. ಆರ್.ಎಸ್.ಬುರಡಿ, ಗದಗ ಗ್ರಾಮೀಣ ಬಿ.ಇ.ಓ. ವಿ.ವಿ.ನಡುವಿನಮನಿ, ಬಿ.ಎಪ್.ಪೂಜಾರ, ಗದಗ ಗ್ರಾಮೀಣ ಟಿ.ಪಿ.ಓ. ಪವಾರ, ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಎಂ.ಎನ್.ತುಕ್ಕ, ಎಸ್.ಎಸ್.ಸಂದಿಗವಾಡ, ವೈ.ಕೆ.ಚೌಡಾಪೂರ, ಎಚ್.ಜಿ.ಕಾಂಬಳೇಕರ, ಎಸ್.ಬಿ.ಪೂಜಾರ, ಪಿ.ಎಸ್.ಹಬೀಬ್, ಎನ್.ಕೆ.ಯರಗುಡಿ ಅವರನ್ನು ಸನ್ಮಾನಿಸಿ ಗೌರವಿಸಿದರು. ಗದಗ ತಾಲೂಕು ಕ್ರೀಡಾಧಿಕಾರಿ ಎಂ.ಎಸ್.ಕುಚಬಾಳ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ವೈ.ಕೆ.ಚೌಡಾಪೂರ ನಿರೂಪಣೆ ಮಾಡಿದರು. ಜೆ.ಬಿ.ಅಣ್ಣಿಗೇರಿ ವಂದಿಸಿದರು. ಗದಗ ತಾಲೂಕಿನ 650ಕ್ಕೂ ಹೆಚ್ಚು ಬಾಲಕ,ಬಾಲಕಿಯರು ಕ್ರೀಡಾ ಕೂಟದಲ್ಲಿ ಭಾಗವಹಸಿದ್ದರು.