ದಸರಾ ಗಜಪಡೆಯಿಂದ ಭಾನುವಾರದಿಂದ ಪೂರ್ಣ ಪ್ರಮಾಣದ ತಾಲೀಮು

abhimanyu
Published on

ಮೈಸೂರು: ನಾಡಹಬ್ಬ ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಗಜಪಡೆ ಭಾನುವಾರದಿಂದ ಪೂರ್ಣ ಪ್ರಮಾಣದ ತಾಲೀಮು ಪ್ರಾರಂಭಿಸಲಿದೆ.

ನಾಗರಹೊಳೆಯ ವೀರನಹೊಸಳ್ಳಿಯಲ್ಲಿ ಆ.7 ರಂದು ಗಜಪಯಣಕ್ಕೆ ಚಾಲನೆ ನೀಡಲಾಯಿತು. ಆ ದಿನ ನಗರದ ಅರಣ್ಯ ಭವನಕ್ಕೆ ಆಗಮಿಸಿದ ಗಜಪಡೆ ಎರಡು ದಿನ ವಿಶ್ರಾಂತಿ ಪಡೆದು ನಂತರ ಆ.9 ರಂದು ಅರಮನೆ ಆವರಣಕ್ಕೆ ಆಗಮಿಸಿತು. ಶನಿವಾರದವರೆಗೆ ಅರಮನೆ ಸುತ್ತ ಬೆಳಗ್ಗೆ ಹಾಗೂ ಸಂಜೆ ಎರಡು ಸುತ್ತು ತಾಲೀಮು ನಡೆಸುತ್ತಿದ್ದ ಗಜಪಡೆ ಭಾನುವಾರದಿಂದ ಪೂರ್ಣಪ್ರಮಾಣದಲ್ಲಿ ತಾಲೀಮು ನಡೆಸಲಿವೆ.

ಬೆಳಗ್ಗೆ ಅರಮನೆಯಿಂದ ಹೊರಟು ಬನ್ನಿಮಂಟಪದವರೆಗೆ ತೆರಳಿ ಹಿಂತಿರುಗಲಿವೆ. ನಂತರ ಸಂಜೆ ಅರಮನೆಯಿಂದ ಹೊರಟು ಆಯುರ್ವೇದ ವೃತ್ತದವರೆಗೆ ತೆರಳಿ ಹಿಂತಿರುಗಲಿದೆ. ಒಂದು ವಾರ ಈ ರೀತಿ ತಾಲೀಮು ನಡೆಸಿದ ನಂತರ ಭಾರ ಹೊರಿಸುವ ತಾಲೀಮು ಪ್ರಾರಂಭಿಸಲಾಗುವುದು ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net