

ಶ್ರೀರಂಗಪಟ್ಟಣ: ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಶ್ರೀರಂಗಪಟ್ಟಣ ತಾಲೂಕು ಕಸಾಪ ಸಹಯೋಗದಲ್ಲಿ ಆಯೋಜಿಸಲಾಗಿದ್ದ ದಸರಾ ಕವಿ-ಕಾವ್ಯ ಸಂಭ್ರಮ ಪ್ರಧಾನ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಯುಗದಲ್ಲಿ ಪುಸ್ತಕ ಓದುಗರ ಸಂಖ್ಯೆ ಕುಗ್ಗಿದೆ. ಕೆಲವರು ಆಧುನಿಕ ತಂತ್ರಜ್ಞಾನ ಬಳಸಿ ಓದುವ ಹವ್ಯಾಸಕ್ಕೆ ಕಟ್ಟು ಬಿದ್ದಿದ್ದಾರೆ. ಆಧುನಿಕ ಸಾಧನಗಳಿಂದ ಓದುವುದು ಅಷ್ಟು ಖುಷಿಯನ್ನು ನೀಡುವುದಿಲ್ಲ. ಕವಿಗಳು ಹೊಸ ಚಿಂತನೆಯನ್ನು ಬೆಳೆಸಿ ಸಮಾಜಮುಖಿ ಲೇಖನಗಳನ್ನು ನೀಡುತ್ತಾರೆ. ಅದನ್ನು ಕಾರ್ಯರೂಪಕ್ಕೆ ತರಬೇಕು. ಕವಿಗಳು ಚಿಂತನೆಯಿಂದ ಸಮಾಜವನ್ನು ಬದಲಾಯಿಸುವ ಶಕ್ತಿ ಇದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ದಸರಾ ಆಚರಣೆಯಲ್ಲಿ ನವದುರ್ಗೆಯರಿಗೆ ಪೂಜೆ ಸಲ್ಲಿಸುತ್ತೇವೆ. ನವರಾತ್ರಿ ಮಹಿಳಾ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಕನ್ನಡದ ಸಾಹಿತ್ಯಕ್ಕೆ ಅನೇಕ ಮಹಾನ್ ಕವಿಗಳು ಕೊಡುಗೆ ನೀಡಿದ್ದಾರೆ. ಪಾಂಡಿತ್ಯ ಹೊಂದಿರುವವರು ತಮ್ಮ ಪಾಂಡಿತ್ಯವನ್ನು ಇತರರಿಗೆ ತಿಳಿಸದೆ ಹೋದರೆ ಪ್ರಯೋಜನವಿಲ್ಲ. ಕವಿಗಳು ತಮ್ಮ ಕವಿತೆಗಳ ಮೂಲಕ ಸಮಾಜದ ಡೊಂಕುಗಳನ್ನು ತಿದ್ದಬೇಕು. ಕವಿಗೋಷ್ಠಿಗಳಿಂದ ಸಾಹಿತ್ಯದ ನವರಸಗಳನ್ನು ಸವಿಯಬಹುದು. ಕವಿಗೋಷ್ಠಿಗಳು ನಮ್ಮ ಜ್ಞಾನವನ್ನು ವೃದ್ಧಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ತಾಲೂಕು ಕಸಾಪ ಅಧ್ಯಕ್ಷ ಸಿದ್ದಲಿಂಗು, ಜಿಲ್ಲಾ ಕಸಾಪ ಸದಸ್ಯ ಹರ್ಷ, ಪುರಸಭೆ ಸದಸ್ಯ ಕೃಷ್ಣಪ್ಪ ಮಾತನಾಡಿದರು. ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಬಿ.ಕುಮಾರ್, ಪುರಸಭೆ ಪ್ರಭಾರ ಅಧ್ಯಕ್ಷ ಎಂ.ಎಲ್.ದಿನೇಶ್, ನಿಮಿಷಾಂಬ ದೇವಾಲಯದ ಅಧ್ಯಕ್ಷ ಎಚ್.ಎನ್.ದಯಾನಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ.ನಂದೀಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಶ್ರೀನಿವಾಸ, ಶ್ರೀರಂಗಪಟ್ಟಣ ನಗರ ಘಟಕದ ಅಧ್ಯಕ್ಷ ಎಂ.ಸುರೇಶ್, ಮಂಡ್ಯ ತಾಲೂಕು ಕಸಾಪ ಅಧ್ಯಕ್ಷ ಚಂದ್ರಲಿಂಗು, ಪುರಸಭೆ ಸದಸ್ಯ ಕೃಷ್ಣಪ್ಪ, ಮಹಾದೇವಸ್ವಾಮಿ ಇತರರಿದ್ದರು.
ಕವಿಗಳಾದ ನಾಗಮಂಗಲದ ಆನಂದಮೂರ್ತಿ, ಮಹದೇವಸ್ವಾಮಿ, ಮದ್ದೂರಿನ ಸ್ವಾಮಿ, ಮಹದೇವು, ಮಂಡ್ಯದ ರಾಜೇಶ್, ಅಶ್ವಿನಿ ದಕ್ಷಿಣಮೂರ್ತಿ, ಮಂಜುಳಾ, ಕೆ.ಆರ್.ಪೇಟೆ ಡಿ.ನಾರಾಯಣಸ್ವಾಮಿ, ಮಜ್ಜಿಗೆಪುರದ ಎಂ.ಕೆ.ಶಿವರಾಮು, ಶ್ರೀರಂಗಪಟ್ಟಣದ ಜಿ.ಬಿ. ಮಂಜುಳಾ, ಉಮಾಶಂಕರ್, ಅಪ್ಪಾಜಿ, ಎ.ಎಸ್.ಶ್ರೀಲತಾ, ಎಂ.ರಾಜು, ಜೆ.ಜಯರಾಂ, ಆರ್.ಸೋಮಶೇಖರ್, ಪಾಲಹಳ್ಳಿ ಸಿದ್ಧನಂಜಯ್ಯ, ಮಳವಳ್ಳಿಯ ಚುಂಚಣ್ಣ, ರಾಮಚಂದ್ರ, ಪಾಂಡವಪುರದ ಶ್ವೇತಾ. ಡಿ,ಗಾನಸುಮಾ, ಶಶಿಧರ ಸಬ್ಬನಹಳ್ಳಿ, ಕಾಡುಬೋರಣ್ಣ ತಾವು ರಚಿಸಿದ ಕವಿತೆಗಳನ್ನು ವಾಚನ ಮಾಡಿದರು.