ದಸರಾ ಕಚೇರಿ ಉದ್ಘಾಟಿಸಿದ ಡಾ. ಮಂತರ್ ಗೌಡ

Dasara office was inaugurated by Dr. Mantar Gowda
Published on

ಮಡಿಕೇರಿ:

ಮಡಿಕೇರಿಯಲ್ಲಿ ಈ ವರ್ಷ ನಾಡಹಬ್ಬವನ್ನು ವಿಜೃಂಭಣೆಯಿAದ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ ಎಂದು ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಹೇಳಿದರು. ಭಾನುವಾರ ಮಡಿಕೇರಿಯಲ್ಲಿ ನಾಡಹಬ್ಬ ದಸರಾ ಕಚೇರಿ ಉದ್ಘಾಟಿಸಿ ಮಾತನಾಡಿದರು.

ಮಡಿಕೇರಿ ದಸರಾಕ್ಕೆ ಸರ್ಕಾರದಿಂದ ಉತ್ತಮ ಅನುದಾನ ದೊರಕುವ ನಿರೀಕ್ಷೆಯಿದೆ. ಮಕ್ಕಳ ದಸರಾ, ಮಹಿಳಾ ದಸರಾ, ಜಾನಪದ ಮತ್ತು ಯುವ ದಸರಾದೊಂದಿಗೆ ಈ ಬಾರಿ ಕಾಫಿ ಜಿಲ್ಲೆಯನ್ನು ಪ್ರತಿಬಿಂಬಿಸುವ ಕಾಫಿ ದಸರಾ ಕೂಡ ಆಯೋಜಿಸಿರುವುದು ವಿಶೇಷವಾಗಿದೆ. ಕಾಫಿ ಕೃಷಿಕರಿಂದ ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ರವಾಗುತ್ತಿದೆ.
ದಶಮಂಟಪಗಳ ಶೋಭಾಯಾತ್ರೆಯೊಂದಿಗೆ 9 ದಿನಗಳ ಕಾಲ ನಗರದಲ್ಲಿ ವಿಜೃಂಭಣೆಯ ದಸರಾ ಉತ್ಸವ ಆಯೋಜನೆಗಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದರು.

ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಬಿ.ವೈ., ಖಜಾಂಚಿ ಅರುಣ್ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್. ಟಿ., ದಶಮಂಟಪ ಸಮಿತಿ ಅಧ್ಯಕ್ಷ ಜಗದೀಶ್, ನಗರಸಭೆಯ ಪೌರಾಯುಕ್ತ ರಮೇಶ್, ನಗರಸಭಾ ಸದಸ್ಯರಾದ ಅನಿತಾ ಪೂವಯ್ಯ, ಸವಿತಾ ರಾಕೇಶ್, ಮಹೇಶ್ ಜೈನಿ, ಶ್ವೇತಾ ಪ್ರಶಾಂತ್, ಸಬಿತಾ, ಅಮೀನ್ ಮೊಯಿಸಿನ್, ಶ್ವೇತಾ, ಮನ್ಸೂರ್, ದಸರಾ ಸಮಿತಿ ಪ್ರಮುಖರಾದ ಬಿ. ಎಂ. ರಾಜೇಶ್, ಎ. ಸಿ. ದೇವಯ್ಯ, ಪಿ ಡಿ ಪೊನ್ನಪ್ಪ, ವೀಣಾಕ್ಷಿ, ಮೀನಾಜ್, ತೆನ್ನೀರ ಮೈನಾ, ದಸರಾ ವಿವಿಧ ಸಮಿತಿಯ ಸದಸ್ಯರು, ನಗರಸಭೆಯ ಅಧಿಕಾರಿಗಳು, ಸೇರಿದಂತೆ ಇತರರು ಇದ್ದರು.

ಶ್ರೀಕೃಷ್ಣ ಉಪಾಧ್ಯಾಯ ಅವರು ಗಣಪತಿ ಮತ್ತು ದುರ್ಗಾ ಪೂಜೆಯ ಕೈಂಕರ್ಯ ನೆರವೇರಿಸಿದರು.

ಶಾಸಕರ ನಗರ ಸಂಚಾರ:
ಇದಕ್ಕೂ ಮೊದಲು ಶಾಸಕ ಡಾ.ಮಂತರ್ ಗೌಡ ಅವರು ನಗರ ಸಂಚಾರ ಮಾಡಿದರು. ನಗರಸಭೆ
ವ್ಯಾಪ್ತಿಯ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರೊದಳಗಿನ ರಸ್ತೆ ಮತ್ತು ಚರಂಡಿಗೆ ಸಂಬAಧಿಸಿದ ಅಭಿವೃದ್ಧಿ ಕಾರ್ಯಗಳನ್ನು ದಸರಾ ಶುರುವಾಗುವುದರೊಳಗೆ ಪೂರ್ಣಗೊಳಿಸುವಂತೆ ಸ್ಥಳದಲ್ಲಿ ಇದ್ದ ಅಧಿಕಾರಿಗಳಿಗೆ ಸೂಚಿಸಿದರು.

ಇಂದಿರಾನಗರ ರಸ್ತೆ, ಶ್ರೀ ಕೋದಂಡರಾಮ ದೇವಾಲಯ ಬಳಿಯ ರಸ್ತೆ, ಭಗವತಿ ನಗರದ ಬಳಿಯ ಅಬ್ಬಿಫಾಲ್ಸ್ಗೆ ತೆರಳುವ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳ ರಸ್ತೆ ಕಾಮಗಾರಿಗೆ ಶಾಸಕರು ಇದೇ ಸಂದರ್ಭ ಭೂಮಿಪೂಜೆ ನೆರವೇರಿಸಿದರು.
ಗೌಳಿಬೀದಿ ಸೇರಿದಂತೆ ವಿವಿಧೆಡೆ ಅಪೂರ್ಣಗೊಂಡಿರುವ ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು
ಪರಿಶೀಲಿಸಿದ ಅವರು, ದಸರಾ ಹಬ್ಬ ಸಮೀಪಿಸುತ್ತಿದ್ದು, ಯಾವುದೇ ಕಾರಣಕ್ಕೂ ಕಾಮಗಾರಿ ನಿಧಾನವಾಗಬಾರದು. ಗುಣಮಟ್ಟದೊಂದಿಗೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಹಬ್ಬದ ಸಂದರ್ಭಲ್ಲಿ ನಗರ ವ್ಯಾಪ್ತಿಯಲ್ಲಿನ ರಸ್ತೆಗಳು ಉತ್ತಮ ಸ್ಥಿತಿಯಲ್ಲಿರಬೇಕು, ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ. ರಾಜೇಶ್, ಸದಸ್ಯರುಗಳಾದ ಆರ್.ಪಿ. ಚಂದ್ರಶೇಖರ್ ಮಿನಾಜ್ ಪ್ರವೀಣ್, ನಗರಸಭೆಯ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ, ಮಾಜಿ ಉಪಾಧ್ಯಕ್ಷೆ ಸವಿತಾ ರಾಕೇಶ್, ಸದಸ್ಯರುಗಳು, ಪೌರಾಯುಕ್ತ ಹೆಚ್.ಆರ್. ರಮೇಶ್ ಮತ್ತಿತರರು ಈ ವೇಳೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net