ಸೇವಾ ಪೋರ್ಟಲ್‌ನಲ್ಲಿ ದಸರಾ ಸಿನಿಮಾ ಟಿಕೆಟ್ ಲಭ್ಯ

mysore
Published on

ಮೈಸೂರು: ದಸರಾ ಚಲನಚಿತ್ರೋತ್ಸವ ಅಕ್ಟೋಬರ್ 3ಕ್ಕೆ ಉದ್ಘಾಟನೆಯಾಗಲಿದ್ದು, ಅ.4ರಿಂದ 10ರವರೆಗೆ ಚಲನಚಿತ್ರಗಳ ಪ್ರದರ್ಶನ ಆಯೋಜಿಸಲಾಗಿದೆ.


ಗ್ರಾಮಾಂತರ ಪ್ರದೇಶದಲ್ಲಿ ಸಿನಿ ಪ್ರಿಯರಿಗೆ ಸುಲಭವಾಗಿ ಲಭ್ಯವಾಗುವಂತೆ ಆನ್‌ಲೈನ್ ಮೂಲಕ ಆಧಾರ್ ಕಾರ್ಡ್ ಬಳಸಿ ನೋಂದಣಿ ಮಾಡಿ ಟಿಕೆಟ್ ಬುಕಿಂಗ್ ಹಾಗೂ ಮಾಹಿತಿ ಪಡೆಯಬಹುದಾಗಿದೆ.


ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಾಮ ಒನ್ ಮತ್ತು ನಗರ, ಪಟ್ಟಣ ವ್ಯಾಪ್ತಿಯಲ್ಲಿ ಕರ್ನಾಟಕ ಒನ್ ಹಾಗೂ ಮೈಸೂರು ಒನ್ ಕೇಂದ್ರದ ಸೇವಾ ಪೋರ್ಟಲ್‌ನಲ್ಲಿ ಯಾವುದೇ ನೋಂದಣಿ ಮಾಡದೇ ಅಗತ್ಯ ಮಾಹಿತಿ ನೀಡಿ ಸಿನಿಮಾ ಟಿಕೆಟ್ ಪಡೆಯಬಹುದು. ಚಲನಚಿತ್ರೋತ್ಸವ ಟಿಕೆಟ್ ದರ ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ 300 ರೂ. ಆಗಿದ್ದು, ಇತರರಿಗೆ 500 ರೂ. ನಿಗದಿ ಮಾಡಲಾಗಿದೆ.


ನಗರದ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್ ನಿಲ್ದಾಣ, ನಗರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮೃಗಾಲಯದ ಎದುರಿನ ಪಾಕಿರ್ಂಗ್ ಆವರಣ, ಬಯಲು ರಂಗಮಂದಿರದ ಯುವ ಸಂಭ್ರಮದ ವೇದಿಕೆಯ ಆವರಣದಲ್ಲಿ ಪಾಸ್ ಪಡೆಯಲು ಅನುಕೂಲವಾಗುವಂತೆ ಕಿಯಾಸ್ಕ್‌ಗಳನ್ನು ಸಹ ಸ್ಥಾಪಿಸಲಾಗುತ್ತಿದೆ ಎಂದು ಚಲನಚಿತ್ರೋತ್ಸವ ಉಪ ಸಮಿತಿಯ ಉಪ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.


ಜಿಲ್ಲೆಯಲ್ಲಿ ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ಲಿ 346 ಗ್ರಾಮ ಒನ್ ಕೇಂದ್ರಗಳು, ನಗರ ಹಾಗೂ ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ 52 ಕರ್ನಾಟಕ ಒನ್ ಕೇಂದ್ರಗಳಲ್ಲಿಯೂ ಸಿನಿಮಾ ಪಾಸ್‌ಗಳು ಸಿನಿಮಾಸಕ್ತರಿಗೆ ಲಭ್ಯವಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net