ಸಮಾಜವನ್ನುಎಚ್ಚರಿಸುವ ಕವನ

28_10_Mdy_Kasapa
Published on

ಮಂಡ್ಯ: ಪ್ರಸ್ತುತ ಆಧುನಿಕತೆಯ ದಿನಗಳಲ್ಲೂ ಸೃಜನಾತ್ಮಕ ಕವಿತೆ-ಕವನಗಳು ಸಮಾಜವನ್ನು ಎಚ್ಚರಿಸುತ್ತಿವೆ ಎಂದು ಮೈಸೂರು ಮಹಾರಾಜ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಎಂ.ಬಿ.ಸುರೇಶ್ ಮಾರನಹಳ್ಳಿ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕಸಾಪ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಬುಧವಾರ ಆಯೋಜಿಸಿದ್ದ ದಸರಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಇಂದಿನ ಕವಿತೆಗಳು ಸಮಾಜಕ್ಕೆ ತತ್‌ಕ್ಷಣದಲ್ಲಿ ಪ್ರತಿಕ್ರಿಯಿಸುತ್ತಿವೆ. ಯಾವುದೇ ಸಮಸ್ಯೆ ಇರಲಿ, ಸಂಕಷ್ಟಕರ ತಂದ ಕೋವಿಡ್ ದಿನಗಳಲ್ಲಿನ ತಳಮಳ, ತಲ್ಲಣಗಳನ್ನು ಪದಗಳ ಸಾಲಿನಲ್ಲಿ ಕಟ್ಟಿಕೊಡುವ ಕೌಶಲ ಜ್ಞಾನ, ಸಾಹಿತ್ಯ ಪ್ರಜ್ಞೆ ಹೆಚ್ಚಾಗುತ್ತಿದೆ. ವಾಟ್ಸಾಪ್, ಫೇಸ್‌ಬುಕ್‌ಗಳಿಗೆ ಹಾಕಿ ಜಾಗೃತಿ ಮೂಡಿಸುವುದು ಕಂಡು ಬರುತ್ತಿದೆ ಎಂದು ನುಡಿದರು.
ಹಿರಿಯ ಸಾಹಿತಿ ಡಾ.ಪ್ರದೀಪಕುಮಾರ ಹೆಬ್ರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ, ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಬಿ.ಹೂಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net