ಒಕ್ಕಲಿಗರ ವಿರುದ್ಧ ವಿವಾದ್ಮಾಕ ಹೇಳಿಕೆ: ಮೈಸೂರು ದಸರಾ ಕವಿಗೋಷ್ಠಿಯಿಂದ ಹೊರಬಿದ್ದ ಕೆ.ಎಸ್. ಭಗವಾನ್

Bhagavan
Published on

ಮೈಸೂರು: ಒಕ್ಕಲಿಗ ಸಮುದಾಯದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸ್ಪಂದನ ಸಾಂಸ್ಕೃತಿಕ ಪರಿಷತ್ ಅ.16 ರಂದು ಹಮ್ಮಿಕೊಂಡಿರುವ ‘ದಸರಾ ಯುವ ಕವಿಗೋಷ್ಠಿ’ ಕಾರ್ಯಕ್ರಮದಿಂದ ಕೈ ಬಿಡಲಾಗಿದೆ.

ವಿಜಯನಗರ ಮೊದಲನೇ ಹಂತದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗ್ಗೆ 10ಕ್ಕೆ ದಸರಾ ಯುವ ಕವಿಗೋಷ್ಠಿ ಹಮ್ಮಿಕೊ ಳ್ಳಲಾಗಿದ್ದು, ಪ್ರೊ.ಕೆ.ಎಸ್. ಭಗವಾನ್ ಅವರನ್ನು ಉದ್ಘಾಟಕರಾಗಿ ಆಹ್ವಾನಿಸಲಾಗಿತ್ತು. ಅ.13 ರಂದು ನಗರದ ಪುರಭವನದಲ್ಲಿ ಹಮ್ಮಿಕೊ ಂಡಿದ್ದ ಮಹಿಷ ದಸರಾ ಕಾರ್ಯಕ್ರಮದಲ್ಲಿ ಭಗವಾನ್ ಒಕ್ಕಲಿಗ ಸಮುದಾಯದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದರಿಂದ ಕೆರಳಿದ ಒಕ್ಕಲಿಗ ಸಮುದಾಯದವರು ಭಾನುವಾರ ಕುವೆಂಪುನಗರದಲ್ಲಿರುವ ಭಗವಾನ್ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಭಗವಾನ್ ಅವರನ್ನು ಕವಿಗೋಷ್ಠಿ ಕಾರ್ಯಕ್ರಮದಿಂದ ಕೈಬಿಡುವ ತೀರ್ಮಾನ ಕೈಗೊಳ್ಳಲಾಗಿದ್ದು, ಈ ವಿಚಾರವನ್ನು ಅವರಿಗೆ ಕರೆ ಮಾಡಿ ತಿಳಿಸಲಾಗಿದೆ. ಭಗವಾನ್ ಅವರನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಉದ್ಘಾಟಕರಾಗಿ ಸಾಹಿತಿ ಡಿ.ಕೆ. ರಾಜೇಂದ್ರ ಅವರನ್ನು ಆಹ್ವಾನಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net